ಅಮ್ಮನೊಲುಮೆಯ ಮಡಿಲು

– ಅಮುಬಾವಜೀವಿ.

mother, love, ಅಮ್ಮ, ತಾಯಿ, ಒಲವು

ಅಮ್ಮನೆಂಬ ನೆರಳಿನ
ಅಡಿಯಲಿ ನಾನೊಂದು ಚಿಗುರು
ಈ ಬದುಕು ಕೊಟ್ಟ ದೇವತೆಗೆ
ನಾವಿಟ್ಟಿಹೆವು ಅಮ್ಮ ಎಂಬ ಹೆಸರು

ಎಲ್ಲಾ ನೋವು ತಾನೆ ನುಂಗಿ
ನಗುತಲಿರುವ ಮಗುವಿನಂತಹವಳು
ತನ್ನ ಹಸಿವ ತೋರಗೊಡದೆ
ಎಲ್ಲರ ಹಸಿವ ನೀಗೋ ಅನ್ನಪೂರ‍್ಣೆ ಅವಳು

ಏನೇ ಕಶ್ಟ ಬಂದರೂ ಮೊದಲು
ನುಡಿವ ಮಾತೇ ಅಮ್ಮ
ಬೇಗ ಎದ್ದು ಕೊನೆಗೆ ಮಲಗುವ
ನಿಸ್ವಾರ‍್ತದ ಕೆಲಸಗಾರ‍್ತಿ ಅಮ್ಮ

ಗಂಡ ಮನೆ ಮಕ್ಕಳನ್ನು
ಸಲಹುವ ಶಕ್ತಿಯೇ ಅಮ್ಮ
ಬಡತನವಿರಲಿ ಸಿರಿತನವಿರಲಿ
ಅವಳದೊಂದೇ ರೀತಿಯ ಪ್ರೇಮ

ಬೆಟ್ಟದಂತ ಕಶ್ಟವನ್ನು ಕರಗಿಸುವುದು
ಅಮ್ಮನೊಲುಮೆಯ ಮಡಿಲು
ಅವಳ ಪ್ರೀತಿಯ ವಿಸ್ತಾರ ಕಂಡು
ಚಿಕ್ಕದಾಯ್ತು ಆ ಮಹಾ ಕಡಲು

ಅಮ್ಮನಂತಹ ದೇವತೆ ಇರಲು
ಬೇರೆ ದೇವರ ಬೇಡುವುದೇಕೆ
ಅಮ್ಮನನ್ನೊಮ್ಮೆ ಕುಶಿ ಪಡಿಸಲು
ಸಾಕವಳಿಗೆ ಅದುವೆ ಕಾಣಿಕೆ

(ಚಿತ್ರ ಸೆಲೆ:  penciljammers.com)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Bharath Raj says:

    ಸುಂದರವಾಗಿದೆ ಕವನ

ಅನಿಸಿಕೆ ಬರೆಯಿರಿ:

%d bloggers like this: