ಮಹಾಬಾರತದ ಕತೆಯು

– ಪದ್ಮನಾಬ.

ಮಹಾಬಾರತ, Mahabharata

ಚಂದ್ರವಂಶವೇ ಶಾಂತವಾಗುವ ಸಮಯದಲಿ
ಹುಟ್ಟಿದ ಕಂದನೇ ಶಂತನು ಎಂಬುವನು
ಗಂಗೆಯ ಅಂದಕ್ಕೆ ಮನಸೋತು
ನಿನ್ನಿಚ್ಚೆಗೆ ಅಡ್ಡಬಾರನೆಂದೂ
ನೀನಾರು ಎಂದವಳ ಕೇಳೆನೆಂದೂ
ಮಾತನು ಕೊಟ್ಟು ಸಾನುರಾಗದಿ ಅವಳ ವರಿಸಿದನು

ಏಳುಮಕ್ಕಳು ನೀರುಪಾಲಾದರೂ ಮೌನ
ಎಂಟನೆಯ ಯತ್ನಕ್ಕೆ ತಡೆದನವಳ
ಎಂಟನೆಯ ಆ ಸುತನೇ ದೇವವ್ರತನು
ತನ್ನ ಪ್ರತಿಗ್ನೆಯಿಂದ ಬೀಶ್ಮನೆನಿಸಿದನು
ಸತ್ಯವತಿಯನು ತಂದೆಯ ಪತ್ನಿಯಾಗಿಸಲು
ಸ್ವಾರ‍್ತವೆಲ್ಲವ ತೊರೆದನು ಇಚ್ಚಾಮರಣದ ವರ ಪಡೆದನು

ಇಂತಿಪ್ಪ ವಂಶದಲಿ ಜನಿಸಿದ್ದ
ದ್ರುತರಾಶ್ಟ್ರ ಹುಟ್ಟುಕುರುಡನು
ತಮ್ಮ ಪಾಂಡುವು ಮಡದಿ ಮಾದ್ರಿಯ
ಸಂಗಬಯಸಿ ಮಡಿಯೆ ರುಶಿ ಶಾಪದಲಿ
ಗದ್ದುಗೆಯನೇರಿದ್ದ ಕುರುಡ ರಾಜನು
ಇರಲು ರಕ್ಶಣೆಗೆ ಬೀಶ್ಮ ತಾನು
ದಾಯಾದಿ ಮತ್ಸರವು
ಕಾಡಿತ್ತು ವಂಶವನೇ

ಅತಿ ಮುದ್ದು ಮಕ್ಕಳಲಿ ಪಕ್ಶಪಾತವದು
ಮನಕೆಡಿಸಿ ಸರ‍್ವನಾಶಕೆ ನಾಂದಿಯನು ಹಾಡಿತ್ತು
ನಿರ‍್ಲಕ್ಶ್ಯವೂ ಕರ‍್ಣನ ಹಾಳುಗೆಡಹಿತ್ತು
ವಿದುರನ ಗ್ನಾನವನು ಮೂಲೆಗೆಸೆದಿತ್ತು
ಕೇಶವನ ಕರುಣೆಯು ತಲೆಯ ಕಾಯ್ದಿತ್ತು
ದ್ರೌಪದಿಯ ಪಾಂಡವರ ಸಂಕಶ್ಟದಲ್ಲಿ
ದರ‍್ಮಜನ ನಯನೀತಿ ಬೀಮನ ಅತಿಬಲವು
ಅರ‍್ಜುನನ ಕೌಶಲ್ಯ ಎಲ್ಲರನು ಗೆದ್ದಿತ್ತು
ಮತ್ಸರದ ಹೆಡೆಯೊಂದು ಕೌರವನಲ್ಲಿ ಹೆಡೆ ಎತ್ತಿತ್ತು

ಶಕುನಿಯೇ ಮತಿಸಿದನು ಬಾರತದ ಸಾಗರವ
ದುರ‍್ಯೋದನನೇ ಆದ ಕಡಗೋಲು ಅದಕೆ
ದ್ರುತರಾಶ್ಟ್ರ ವ್ಯಾಮೋಹದ ಹಗ್ಗ ತಾನಾಗಿರಲು
ವನವಾಸ ಅಗ್ನಾತವಾಸದ ನೊರೆತೆರೆಗಳು
ಮತ್ತೆ ಯುದ್ದದ ಸುಳಿಯು ಹಾಲಾಹಲವು
ಅದರೊಳಗೆ ಎದ್ದ ಗೀತಸಾರಾಮ್ರುತವು

ಬೀಶ್ಮ ದ್ರೋಣರ ಮರಣ ಶಲ್ಯಕರ‍್ಣರ ನಿದನ
ಗದಾಯುದ್ದದಿ ಕೌರವನ ಅವಸಾನ
ದರ‍್ಮಕ್ಕೆ ವಿಜಯವೆಂಬ ನವನೀತವು
ಲೋಕದೊಳು ತಾ ಮೆರೆಯೆ ಮಹಾಬಾರತದ ಕತೆಯು

(ಚಿತ್ರ ಸೆಲೆ: ttvaibhavam.com

ನಿಮಗೆ ಹಿಡಿಸಬಹುದಾದ ಬರಹಗಳು

2 Responses

  1. Bharath Raj says:

    ಮಹಾಭಾರತವೆ ಕಣ್ಣಮುಂದೆ ನಡೆದ ಅನುಭವ…ಸುಂದರವಾಗಿದೆ

  2. MANJUNATHA Y says:

    ತುಂಬಾ ಚೆನ್ನಾಗಿದೆ

ಅನಿಸಿಕೆ ಬರೆಯಿರಿ:

%d bloggers like this: