ಸಾವಿನ ಸಾವು
ಈವ್ ಆಡಮ್‌ರು
ದೇವರಿತ್ತ ಎಚ್ಚರಿಕೆ ಮರೆತು
ತಿನ್ನಬಾರದು ಪಲ
ತಿಂದುದರ ಪಲವಾಗಿ
ಜನಿಸಿತ್ತು ಸಾವು
ಬೆಳೆಬೆಳೆಯುತ್ತಾ
ಪ್ರಪಂಚ ವಿಸ್ಮಯಗಳ ನೋಡುತ್ತಾ
ಸಹಜ ಕುತೂಹಲದಿ
ಚಂದದ ಹೂ ಮುಟ್ಟಲು
ತಕ್ಶಣವೇ ಮುದುಡಿತು ಕುಸುಮ
ಚಿಲಿಪಿಲಿ ಗುಟ್ಟುವ ಹಕ್ಕಿ
ಚಂಗನೆ ಓಡುವ ಚಿಗರೆ
ಬಣ್ಣದ ಚಿಟ್ಟೆ ಮುದ್ದಾದ ಮೊಲ
ಬುದ್ದಿವಂತ ಮಾನವ
ಸಾವಿನ ಕೈ ಸೋಕಿದೊಡನೆ
ನಿರ‍್ಜೀವ ಎಲ್ಲವೂ
ಸಾವಿಗೆ ತಿಳಿದಿರಲಿಲ್ಲ
ತನ್ನದು ವಿನಾಶಕ ಕೈ ಎಂದು
ಮುಟ್ಟಿದ್ದೆಲ್ಲವೂ ಕಮರುತಿರಲು
ಸಾವಿಗೆ ತಿಳಿಯಿತು
ತನ್ನ ಹುಟ್ಟಿನ ಸತ್ಯ
ದೂಶಿಸಲ್ಪಟ್ಟು ದ್ವೇಶಿಸಲ್ಪಟ್ಟು
ಒಬ್ಬಂಟಿಯಾದ ಸಾವು
ಬೇಸತ್ತು ಕಾಯುತ್ತಿದೆ
ಎಂದೂ ಬಾರದ
ಸಾವಿನ ಸಾವಿಗೆ
(ಚಿತ್ರ ಸೆಲೆ: pixabay.com)
ಸಾವಿನ ಮನಸಿನಲ್ಲೊಂದು ಸಹೃದಯತೆ ಹುಡುಕುವ ಸೂಕ್ಷ್ಮತೆ.
ಕವನ ತುಂಬಾ ಸೊಗಸಾಗಿದೆ…
ಅದ್ಭುತ ಕವನ, ಇದನ್ನು ನಕಲಿಸಬಹುದೇ?