ಕವಿತೆ: ಮರಳಿ ಬಂದಿದೆ ಯುಗಾದಿ

ಕಾವೇರಿ ಸ್ತಾವರಮಟ.

ಬೇವುಬೆಲ್ಲ, ಯುಗಾದಿ, Ugadi

ನವಚೈತ್ರ ರುತುಗಾನದಿ
ಹೂಕುಸುಮ ಜಾತ್ರೆಯಲಿ
ಬೇವು ಬೆಲ್ಲದ ಸಿಹಿ ಕಹಿ
ತಂದಿದೆ ಯುಗಾದಿ

ಸೂರ‍್ಯನ ಉದಯದಿ
ಎಳೆಮಾವು ಎಳಸಲಿ
ಕೋಗಿಲೆಯ ಕುಹೂ ಗಾನ
ಹಾಡಿಸಿದೆ ಯುಗಾದಿ

ಹಚ್ಚ ಹಸಿರಿನ ಚಿಗುರು
ಜಲಲ ಜಲದಾರೆಯಾಗಿ
ಲಯದಿ ರಾಗವ ಮಿಡಿದು
ಹಾಡಿದೆ ಯುಗಾದಿ

ಹಳೆಬೇರು ಹೊಸ ಚಿಗುರು
ಸವಿಬಾಳ ಕನಸೊಂದ ಮೀಟುತ
ಮರಳಿ ಬಂದಿದೆ ಯುಗಾದಿ
ಹರುಶ ತಂದಿದೆ ಯುಗಾದಿ

( ಚಿತ್ರ ಸೆಲೆ: welcome-the-new-year-with-ugadi )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: