ಬಿಸಿ ಬಿಸಿ ಮಿರ‍್ಚಿ (ಮೆಣಸಿನಕಾಯಿ) ಬಜ್ಜಿ

– ಸವಿತಾ.

ಬೇಕಾಗುವ ಸಾಮಾನುಗಳು

  • ಕಡಲೆ ಹಿಟ್ಟು – 1 ಬಟ್ಟಲು
  • ಹಸಿ ಮೆಣಸಿನಕಾಯಿ – 7-8
  • ಜೀರಿಗೆ – 1 ಚಮಚ
  • ಉಪ್ಪು – 1 ಚಮಚ
  • ಓಂ ಕಾಳು – 1/4 ಚಮಚ
  • ಅಡುಗೆ ಸೋಡಾ – 1/4 ಚಮಚ
  • ಅಕ್ಕಿ ಹಿಟ್ಟು – 2 ಚಮಚ
  • ಕರಿಯಲು ಎಣ್ಣೆ

ಮಾಡುವ ಬಗೆ

ತೊಟ್ಟು ಹಾಗೇ ಇಟ್ಟು ಹಸಿ ಮೆಣಸಿನಕಾಯಿಯನ್ನು ನಡುವೆ ಸೀಳಿ ಇಟ್ಟುಕೊಳ್ಳಿ. ಜೀರಿಗೆ, ಉಪ್ಪು ಪುಡಿ ಮಾಡಿ ಇದರಲ್ಲಿ ತುಂಬಿ ತೆಗೆದಿಡಿ. ಎಣ್ಣೆ ಕಾಯಲು ಇಟ್ಟು, 2 ಚಮಚ ಕಾದ ಎಣ್ಣೆಗೆ ಕಡಲೆ ಹಿಟ್ಟು, ಉಪ್ಪು, ಜೀರಿಗೆ ಪುಡಿ, ಓಂ ಕಾಳು, ಅಕ್ಕಿ ಹಿಟ್ಟು ಮತ್ತು ಸ್ವಲ್ಪ ಅಡುಗೆ ಸೋಡಾ ಸೇರಿಸಿ, ನೀರು ಹಾಕಿ ಕಲಸಿ ಬಜ್ಜಿ ಹಿಟ್ಟು ತಯಾರಿಸಿ. ತುಂಬಿದ ಹಸಿ ಮೆಣಸಿನಕಾಯಿಯನ್ನು ಬಜ್ಜಿ ಹಿಟ್ಟಿನಲ್ಲಿ ಅದ್ದಿ, ಕಾದ ಎಣ್ಣೆಯಲ್ಲಿ ಕರಿದು ತೆಗೆಯಿರಿ. ಬಿಸಿ ಬಿಸಿ ಮಿರ‍್ಚಿ ಅತವಾ ಮೆಣಸಿನಕಾಯಿ ಬಜ್ಜಿ ಸವಿಯಲು ತಯಾರು.

ಸಂಜೆಯ ವೇಳೆಗೆ, ಚಹಾ ಜೊತೆ ಸವಿಯಲು ಮಿರ‍್ಚಿ ಬಜ್ಜಿ ಚೆನ್ನಾಗಿರುತ್ತದೆ. ಮೆಣಸಿನಕಾಯಿ ಬಜ್ಜಿಯನ್ನು ಹಬ್ಬ ಹರಿದಿನಗಳಂದು ಹುಗ್ಗಿ, ಹೋಳಿಗೆಯಂತಹ ಸಿಹಿ ಊಟದೊಂದಿಗೆ ನೆಂಚಿಕೊಳ್ಳಲು ನೀಡಬಹುದು.

(ಚಿತ್ರ ಸೆಲೆ: ಸವಿತಾ)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. ಮಾರಿಸನ್ ಮನೋಹರ್ says:

    ತುಂಬಾ ಇಶ್ಟವಾದದ್ದು ಇದು !

ಮಾರಿಸನ್ ಮನೋಹರ್ ಗೆ ಅನಿಸಿಕೆ ನೀಡಿ Cancel reply

Enable Notifications OK No thanks