ಹೊನಲುವಿಗೆ 6 ವರುಶ ತುಂಬಿದ ನಲಿವು

– ಹೊನಲು ತಂಡ.

ಹೊನಲು, 6 ವರುಶ, ಹುಟ್ಟುಹಬ್ಬ, Honalu, 6 Years, Celebration, ಸಡಗರ

ಅನುದಿನವೂ ಓದುಗರಿಗೆ ಬಗೆ ಬಗೆಯ ಬರಹಗಳ ರಸದೌತಣ ನೀಡುತ್ತಾ, ಹೊಸತನವನ್ನು ಮೈಗೂಡಿಸಿಕೊಂಡು ಎಡೆಬಿಡದೇ ಮುನ್ನಡೆಯುತ್ತಿರುವ ಹೊನಲುವಿಗೆ ಇಂದು ಹಬ್ಬದ ಸಡಗರ. ಹೊನಲು ಆನ್‌ಲೈನ್‌ ಮ್ಯಾಗಜೀನ್‌ ಇಂದು 6 ವರುಶಗಳನ್ನು ಪೂರೈಸಿ 7ನೆಯ ವರುಶಕ್ಕೆ ಕಾಲಿಡುತ್ತಿದೆ. ಇದಕ್ಕೆ ಕಾರಣರಾದ ಬರಹಗಾರರಿಗೂ, ಓದುಗರಿಗೂ ಮತ್ತು ಎಲ್ಲರಿಗೂ ಮನದಾಳದ ನನ್ನಿ.

ಇಲ್ಲಿಯವರೆಗೆ 2,600 ಕ್ಕೂ ಹೆಚ್ಚು ಬರಹಗಳು ಹೊನಲಿನಲ್ಲಿ ಮೂಡಿಬಂದಿವೆ. ಕರ‍್ನಾಟಕದ ಬೇರೆ ಬೇರೆ ಜಿಲ್ಲೆಗಳಿಂದ, ಈ ದೇಶದ ಬೇರೆ ಬೇರೆ ರಾಜ್ಯಗಳಿಂದ ಮತ್ತು ಹೊರದೇಶಗಳಿಂದ 275ಕ್ಕೂ ಹೆಚ್ಚು ಬರಹಗಾರರು ಹೊನಲುವಿಗೆ ಬರಹ ಮಾಡಿದ್ದಾರೆ.ಜಗತ್ತಿನ ಹಲವಾರು ದೇಶಗಳಿಂದ ಹೊನಲಿನ ಬರಹಗಳನ್ನುಅನೇಕರು ಓದುತ್ತಿದ್ದಾರೆ. ಹೊನಲು ಪೇಸ್‌ಬುಕ್‌ ಪುಟವು 28,000 ಕ್ಕೂ ಹೆಚ್ಚು ಮೆಚ್ಚುಗೆಗಳನ್ನು ಮತ್ತು ಹೊನಲು ಟ್ಟಟರ‍್‌ ಗೂಡು 4,400 ಕ್ಕೂ ಹೆಚ್ಚು ಮಂದಿ ಹಿಂಬಾಲಕರನ್ನು ಹೊಂದಿರುವುದು ನಲಿವಿನ ವಿಚಾರ. ಬಹಳಶ್ಟು ಮೊಬೈಲ್ ಬಳಕೆದಾರರು ತಮ್ಮ ಆಂಡ್ರಾಯ್ಡ್ ಮೊಬೈಲ್‌ಗಳಲ್ಲಿ ಹೊನಲು ಬಳಕದ (app) ಮೂಲಕ ಬರಹಗಳನ್ನು ಓದುತ್ತಿದ್ದಾರೆ.

ಹೊನಲಿನಲ್ಲಿ ಕತೆ, ಕವಿತೆ, ಅಡುಗೆ, ಗ್ಯಾಜೆಟ್‌, ಆಟೋಟ, ಸೋಜಿಗದ ಸಂಗತಿಗಳು – ಹೀಗೆ ಹತ್ತು ಹಲವಾರು ವಿಶಯಗಳ ಬಗ್ಗೆ ಬರಹಗಳು ಮೂಡಿಬರುತ್ತಿವೆ. ಮಕ್ಕಳಿಗಾಗಿಯೇ ಒಂದು ಕವಲನ್ನು ಹೊನಲಿನಲ್ಲಿ ಮೀಸಲಿಡಲಾಗಿದೆ. ಹೊತ್ತು ಕೊಟ್ಟು ಹೊನಲಿಗಾಗಿ ಬರಹ ಮಾಡುತ್ತಿರುವ ಬರಹಗಾರರ ಶ್ರದ್ದೆ, ಕಾಳಜಿಯಿಂದ ಹೊನಲು ಇಂದು ಬಹಳಶ್ಟು ವಿಶಯಗಳ ಕಣಜವಾಗಿದೆ. ಓದುಗರು ಹೊನಲಿನ ಬರಹಗಳನ್ನು ಓದುತ್ತಾ ಬರಹಗಾರರನ್ನು ಹುರಿದುಂಬಿಸುತ್ತಿರುವುದರಿಂದ ಹೊನಲು ಹಲವಾರು ಮೈಲುಗಲ್ಲುಗಳನ್ನು ದಾಟಲು ಸಾದ್ಯವಾಗುತ್ತಿದೆ.

ಬಹಳಶ್ಟು ವಿಶಯಗಳ ಬಗ್ಗೆ ಬರಹಗಳನ್ನು ಮಾಡುತ್ತಾ, ಹೊನಲಿನ ಬರಹಗಳನ್ನು ಹಂಚಿಕೊಂಡು ಹೆಚ್ಚು ಮಂದಿಗೆ ತಲುಪಿಸುತ್ತಾ, ಹೊನಲುವನ್ನು ವರುಶಗಳನ್ನು ದಾಟಿಸಿ ಮುನ್ನಡೆಸುತ್ತಿರುವ ಬರಹಗಾರರಿಗೂ, ಓದುಗರಿಗೂ ಮತ್ತು ಎಲ್ಲರಿಗೂ ಮತ್ತೊಮ್ಮೆ ನಮ್ಮ ಮನದಾಳದ ನನ್ನಿ. ಹೊನಲಿಗೆ ನಿಮ್ಮ ಬೆಂಬಲ ಹೀಗೇ ಮುಂದುವರೆಯುತ್ತಿರಲಿ 🙂

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Kiran G says:

    ಅಭಿನಂದನೆಗಳು ಹೀಗೆ ಮುಂದುವರಿಯಲಿ

ಅನಿಸಿಕೆ ಬರೆಯಿರಿ:

%d bloggers like this: