ಸಿಹಿ ಸಿಹಿಯಾದ ಶಿರಾ!

– ಸವಿತಾ.

ಶಿರಾ Shira

ಬೇಕಾಗುವ ಪದಾರ‍್ತಗಳು

1 ಲೋಟ ಬಾಂಬೆ ರವೆ
2 1/2 ಲೋಟ ನೀರು
1/2 ಲೋಟ ಸಕ್ಕರೆ
6 ಚಮಚ ತುಪ್ಪ
6 ಗೋಡಂಬಿ
10 ಒಣ ದ್ರಾಕ್ಶಿ
3 ಬಾದಾಮಿ
2 ಎಳೆ ಕೇಸರಿ ದಳ
1 ಚಿಟಿಕೆ ಅರಿಶಿನ ಪುಡಿ
2 ಏಲಕ್ಕಿ

ಮಾಡುವ ಬಗೆ

ಬಾಂಬೆ ರವೆ ಹುರಿದು ತೆಗೆದಿಡಿ. ಬಾಣಲೆಗೆ ಮೂರು ಚಮಚ ತುಪ್ಪ ಹಾಕಿ ಗೋಡಂಬಿ ಬಾದಾಮಿ ಕತ್ತರಿಸಿ ಹಾಕಿ. ಒಣ ದ್ರಾಕ್ಶಿ ಹಾಕಿ ಸ್ವಲ್ಪ ಹುರಿದು ನೀರು ಸೇರಿಸಿ. ಕೇಸರಿ ದಳ, ಹಳದಿ ಬಣ್ಣ ಬರಲು ಸ್ವಲ್ಪ ಅರಿಶಿಣ ಹಾಕಿಕೊಂಡು ಒಂದು ಕುದಿ ಕುದಿಸಿ. ಕುದಿಯುವ ನೀರಿಗೆ ಸಕ್ಕರೆ ಸೇರಿಸಿ. ರವೆ ಸೇರಿಸಿ ಉಳಿದ ತುಪ್ಪ ಸೇರಿಸಿ ಕೈಯಾಡಿಸಿ. ಸಕ್ಕರೆ ಕರಗಿ ನೀರಾಗಿ, ರವೆ ಬೆಂದು ಮುದ್ದೆಯಾಗಿ ಮೇಲೆ ಬರುವಾಗ ಒಲೆ ಆರಿಸಿ. ಈಗ ಶಿರಾ ಸವಿಯಲು ಸಿದ್ದ.

ಏಲಕ್ಕಿ ಪುಡಿಮಾಡಿ ಮೇಲಕ್ಕೆ ಉದುರಿಸಿ, ಇನ್ನೊಮ್ಮೆ ತಿರುವಿ ತಿನ್ನಲು ಕೊಡಿ.

(ಚಿತ್ರ ಸೆಲೆ: ಸವಿತಾ)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: