ಕವಿತೆ: ತೋರು ಕರುಣೆಯನ್ನು

– ಸ್ಪೂರ‍್ತಿ. ಎಂ.

ದೇವರು. ಪ್ರಾರ‍್ತನೆ, ಕೋರಿಕೆ, prayer, god

ದೇವರೇ, ಬರೆಯುವೆ ನಿನಗೆ ಪತ್ರವನ್ನು
ಒಮ್ಮೆ ದರೆಗೆ ಕಳುಹಿಸೆನ್ನ ಅಮ್ಮನನ್ನು

ಬಂದೊಡನೆ ಅವಳನ್ನು ತಬ್ಬುವಾಸೆ
ಒಮ್ಮೆ ಬಿಕ್ಕಿ ಅತ್ತು ಬಿಡುವಾಸೆ

ಅವಳ ಕೈ ತುತ್ತಿನ ರುಚಿ ನೋಡುವಾಸೆ
ಲಾಲಿಹಾಡ ಕೇಳಿ ಮಡಿಲಲ್ಲಿ ಮಲಗುವಾಸೆ

ಚಿಕ್ಕ ಮಗುವಂತೆ ಅವಳೊಂದಿಗೆ ಆಡುವಾಸೆ
ಮನಬಿಚ್ಚಿ ಅವಳಲ್ಲಿ ಮಾತನಾಡುವಾಸೆ

ನನ್ನ ಆಸೆ ಈಡೇರಿಸಿ ಕರೆದುಕೊ ಅವಳನ್ನು
ನಿನ್ನ ನಿಯಮಕ್ಕೆ ಅಡ್ಡಿ ಮಾಡೆನು ನಾನು

ಒಮ್ಮೆ ಕಳುಹಿಸು ನನ್ನ ಅಮ್ಮನನ್ನು
ಕರುಣಾಮಯಿ, ತೋರು ಕರುಣೆಯನ್ನು

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Prashantha T says:

    nice?

ಅನಿಸಿಕೆ ಬರೆಯಿರಿ: