ಬಾಳಕ ಮೆಣಸಿನಕಾಯಿ
– ಸವಿತಾ.
ಏನೇನು ಬೇಕು?
- 15 ಹಸಿ ಮೆಣಸಿನ ಕಾಯಿ
- 3 ಬಟ್ಟಲು ಮಜ್ಜಿಗೆ
- 2 ಚಮಚ ಸಾಬುದಾನಿ
- 1/2 ಚಮಚ ಜೀರಿಗೆ
- ಉಪ್ಪು ರುಚಿಗೆ ತಕ್ಕಶ್ಟು
ಹೇಗೆ ಮಾಡುವುದು?
- ಹಸಿ ಮೆಣಸಿನಕಾಯಿ ತೊಳೆಯಿರಿ. ತೊಟ್ಟು ಹಾಗೇ ಇಟ್ಟುಕೊಂಡು, ಮೆಣಸಿನಕಾಯಿಯ ನಡುವೆ ಮಾತ್ರ ಸೀಳಿ ಇಲ್ಲವೇ ಕತ್ತರಿಸಿ
- ಸೀಳಿದ ಮೆಣಸಿನಕಾಯಿಯನ್ನು ಮಜ್ಜಿಗೆ ಯಲ್ಲಿ ಆರು ಗಂಟೆ ಕಾಲ ನೆನೆ ಹಾಕಬೇಕು (ರಾತ್ರಿ ಹೊತ್ತು ನೆನೆ ಹಾಕಿ ಇಟ್ಟುಕೊಳ್ಳಿ)
- ಸಾಬುದಾನಿಯನ್ನು ಕೂಡ ಒಂದು ಬಟ್ಟಲಲ್ಲಿಎರಡು ಚಮಚ ನೀರು ಸೇರಿಸಿ ನೆನೆ ಹಾಕಿ ಇಟ್ಟುಕೊಳ್ಳಿ
- ಮರು ದಿನ ಸಾಬೂದನಿಗೆ ಜೀರಿಗೆ ಉಪ್ಪು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ
- ಮಜ್ಜಿಗೆಯಿಂದ ಮೆಣಸಿನ ಕಾಯಿ ತೆಗೆದು ರುಬ್ಬಿದ ಸಾಬುದಾನಿ ಅದರಲ್ಲಿ ತುಂಬಿ
- ಈ ಮೆಣಸಿನಕಾಯಿಯನ್ನು ಬಿಸಿಲಿನಲ್ಲಿ 3 ದಿನಗಳ ಕಾಲ ಚೆನ್ನಾಗಿ ಒಣಗಿಸಿಕೊಳ್ಳಿ
- ನಂತರ ಕಾದ ಎಣ್ಣೆಯಲ್ಲಿ ಕರಿದರೆ ಬಾಳಕ ಮೆಣಸಿನಕಾಯಿ ಸವಿಯಲು ಸಿದ್ದ
ಸಿಹಿ ಅಡುಗೆ ಜೊತೆ, ಊಟದ ಜೊತೆ ಬಾಳಕ ಮೆಣಸಿನಕಾಯಿ ಸವಿಯಲು ಚೆನ್ನಾಗಿರುತ್ತದೆ.
ಮೊಸರನ್ನದ ಜೊತೆ ಬಾಳಕ ತುಂಬ ಇಶ್ಟ!