ಮಸಾಲೆ ಕಾರ ಮಾಡುವುದು ಹೇಗೆ?

Masale Kaara, ಮಸಾಲೆ ಕಾರ

 

ಬೇಕಾಗುವ ಪದಾರ‍್ತಗಳು:

1 ಬಟ್ಟಲು ಒಣ ಕಾರ
2 ಈರುಳ್ಳಿ
2 ಚಮಚ ಜೀರಿಗೆ
3 ಕಡ್ಡಿ ಕರಿಬೇವು
1 ಏಲಕ್ಕಿ
1/2 ಇಂಚು ಚಕ್ಕೆ
10 ಲವಂಗ
1 ಚಮಚ ಕರಿಮೆಣಸು
20 – 25 ಬೆಳ್ಳುಳ್ಳಿ ಎಸಳು
1/2 ಇಂಚು ಹಸಿ ಶುಂಟಿ
4  ಮರಾಟಿ ಮೊಗ್ಗು
2 ಚಮಚ ಕಡಲೆ ಕಾಯಿ ಎಣ್ಣೆ
ರುಚಿಗೆ ತಕ್ಕಶ್ಟು ಉಪ್ಪು

ಮಾಡುವ ಬಗೆ:

ಕೆಂಪು ಒಣ ಮೆಣಸಿನ ಕಾಯಿಯನ್ನು ಗಿರಣಿಯಲ್ಲಿ ಪುಡಿ ಮಾಡಿಸಿ ಒಣಕಾರ ಮಾಡಿ ಇಟ್ಟುಕೊಳ್ಳಬೇಕು.

ಎಣ್ಣೆ ಬಿಸಿ ಮಾಡಿ ಅದರಲ್ಲಿ ಕತ್ತರಿಸಿದ ಈರುಳ್ಳಿ ಹಾಕಿ. ಅದಕ್ಕೆ ಸುಲಿದ ಬೆಳ್ಳುಳ್ಳಿ ಎಸಳು, ಕರಿಬೇವು, ಜೀರಿಗೆ ಎಲ್ಲವನ್ನು ಸೇರಿಸಿ ಚೆನ್ನಾಗಿ ಹುರಿದು ತೆಗೆದಿಡಿ. ಆರಿದ ನಂತರ ಮಿಕ್ಸರ್ ನಲ್ಲಿ ಹಾಕಿ, ಅದಕ್ಕೆ  ಒಣ ಕಾರ ಸೇರಿಸಿ ನುಣ್ಣಗೆ ಪುಡಿ ಮಾಡಿ. ಇದನ್ನು ಸ್ವಲ್ಪ ಆರಲು ಬಿಟ್ಟು, ಗಾಜಿನ ಬಾಟಲಿಯಲ್ಲಿ  ತುಂಬಿಡಿ. ಈಗ ಉತ್ತರ ಕರ‍್ನಾಟಕದ ಮಸಾಲೆ ಕಾರ ತಯಾರಾಯಿತು. ಇದನ್ನು ದಿನ ನಿತ್ಯ ಪಲ್ಯ ಹಾಗೂ ಕಾರಬ್ಯಾಳಿ ಮಾಡುವಾಗ ಬಳಸುತ್ತಾರೆ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: