ಕಂಚಿಕಾಯಿ (ಹೇರಳೆ ಕಾಯಿ) ಉಪ್ಪಿನಕಾಯಿ

– ಸವಿತಾ.

herale, kanchikayi, pickle, ಕಂಚಿಕಾಯಿ, ಹೇರಳೆ, ಉಪ್ಪಿನಕಾಯಿ

ಏನೇನು ಬೇಕು?

  • ಕಂಚಿಕಾಯಿ – 1 (ದೊಡ್ಡದು)
  • ಉಪ್ಪು – 2 ಚಮಚ
  • ಕಾರದ ಪುಡಿ – 2 ಚಮಚ
  • ಅರಿಶಿಣ – 1/4 ಚಮಚ
  • ಇಂಗು – 1/4 ಚಮಚ
  • ಬೆಲ್ಲ – 1/4 ಕಿಲೋ
  • ಬೆಳ್ಳುಳ್ಳಿ – 2 ಗಡ್ಡೆ
  • ಎಣ್ಣೆ – 4 ಚಮಚ

ಮಾಡುವ ಬಗೆ

ಕಂಚಿಕಾಯಿ ತೊಳೆದು, ಬಟ್ಟೆಯಿಂದ ಒರೆಸಿಟ್ಟುಕೊಳ್ಳಿ. ಕಂಚಿಕಾಯಿಯನ್ನು ಕತ್ತರಿಸಿ, ಉಪ್ಪು ಬೆಲ್ಲ ಸೇರಿಸಿ ಕುದಿಸಬೇಕು. ಕುಕ್ಕರ್ ನಲ್ಲಾದರೆ ನಾಲ್ಕು ಕೂಗು ಬರುವವರೆಗೆ ಕುದಿಸಿಟ್ಟುಕೊಳ್ಳಿ.

ಬೆಳ್ಳುಳ್ಳಿ ಎಸಳು ಬಿಡಿಸಿಟ್ಟುಕೊಂಡು ಎಣ್ಣೆ ಕಾಯಿಸಿ ಚೆನ್ನಾಗಿ ಹುರಿಯಿರಿ. ಒಲೆ ಆರಿಸಿ, ಅರಿಶಿಣ ಮತ್ತು ಇಂಗು ಸೇರಿಸಿ. ಕುದಿಸಿದ ಕಂಚಿಕಾಯಿ ಹಾಕಿ ಚೆನ್ನಾಗಿ ಕಲಸಿ. ಗಾಜಿನ ಬಾಟಲಿಯಲ್ಲಿ ಹಾಕಿ ಇಟ್ಟುಕೊಳ್ಳಿ.

ಕಂಚಿಕಾಯಿ ಉಪ್ಪಿನಕಾಯಿಯನ್ನು ಅನ್ನ ಇಲ್ಲವೇ ಚಪಾತಿ ಜೊತೆ ಸವಿಯಿರಿ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: