ಕರಿದ ಅವಲಕ್ಕಿ
– ಸವಿತಾ.
ಬೇಕಾಗುವ ಸಾಮಾನುಗಳು
- ದಪ್ಪಅವಲಕ್ಕಿ – 3 ಲೋಟ
- ಒಣ ಕೊಬ್ಬರಿ ತುರಿ – 1 ಲೋಟ
- ಹುರಿಗಡಲೆ – 2 ಚಮಚ
- ಕಡಲೇ ಬೀಜ – 2 ಚಮಚ
- ಒಣ ದ್ರಾಕ್ಶಿ – 1 ಚಮಚ
- ಗೋಡಂಬಿ – 10
- ಕರಿಬೇವು ಎಲೆ – 20
- ಸಾಸಿವೆ – 1 ಚಮಚ
- ಜೀರಿಗೆ -1 ಚಮಚ
- ಒಣ ಕಾರದ ಪುಡಿ – 2 ಚಮಚ
- 4 ಚಮಚ ಎಣ್ಣೆ
- ಕರಿಯಲು ಎಣ್ಣೆ
- ಉಪ್ಪು – ರುಚಿಗೆ ತಕ್ಕಶ್ಟು
- ಅರಿಶಿಣ ಮತ್ತು ಇಂಗು – ಸ್ವಲ್ಪ
ಮಾಡುವ ಬಗೆ
ಅವಲಕ್ಕಿಯನ್ನ ಎರಡು ದಿನ ಬಿಸಿಲಿನಲ್ಲಿ ಒಣಗಿಸಬೇಕು. ಎಣ್ಣೆ ಕಾಯಿಸಿ, ಅವಲಕ್ಕಿ ಕರಿದು ತೆಗೆಯಿರಿ. ಇನ್ನೊಂದು ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ. ಮೊದಲು ಸಾಸಿವೆ, ಜೀರಿಗೆ, ಇಂಗು, ಕರಿಬೇವು ಹಾಕಿ. ನಂತರ ಕಡಲೇ ಬೀಜ ಹುರಿಗಡಲೆ, ಗೋಡಂಬಿ, ಒಣ ದ್ರಾಕ್ಶಿ ಹಾಕಿ ಸ್ವಲ್ಪ ಹುರಿದು ಒಗ್ಗರಣೆ ತಯಾರಿಸಿಕೊಳ್ಳಿ. ಮೇಲೆ ಒಣ ಕೊಬ್ಬರಿ ತುರಿ ಹಾಕಿ ಹುರಿದು ಉಪ್ಪು, ಅರಿಶಿಣ, ಕಾರದ ಪುಡಿ ಸೇರಿಸಿ ಒಲೆ ಆರಿಸಿ. ಬೇಕಾದರೆ ಒಂದು ಚಮಚ ಸಕ್ಕರೆ ಸೇರಿಸಬಹುದು. ಆರಿದ ನಂತರ ಕರಿದ ಅವಲಕ್ಕಿ ಹಾಕಿ ಕಲಸಿ ಇಟ್ಟುಕೊಳ್ಳಿ. ಈಗ ಕರಿದ ಅವಲಕ್ಕಿ ಸಿದ್ದ.
ಅನ್ನ ಸಾರಿನ ಮೇಲೆ ಇದನ್ನು ಗಾರ್ನಿಶ್ ಮಾಡಿ ತಿನ್ನಲು ಚೆನ್ನಾಗಿರುತ್ತವೆ