ಬೆಳ್ಳುಳ್ಳಿ ಚಟ್ನಿ
– ಸವಿತಾ.
ಬೇಕಾಗುವ ಸಾಮಾನುಗಳು
- ಬೆಳ್ಳುಳ್ಳಿ ಎಸಳು – 1 ಬಟ್ಟಲು
- ಕೆಂಪು ಒಣ ಮೆಣಸಿನಕಾಯಿ – 3/4 ಬಟ್ಟಲು
- ಒಣ ಕೊಬ್ಬರಿ ತುರಿ – 1 ಬಟ್ಟಲು
- ಜೀರಿಗೆ – 1 ಚಮಚ
- ಒಣ ಕಾರದ ಪುಡಿ – 1/2 ಚಮಚ
- ಎಣ್ಣೆ – 2 ಚಮಚ
- ಉಪ್ಪು – ರುಚಿಗೆ ತಕ್ಕಶ್ಟು
ಮಾಡುವ ಬಗೆ
ಬೆಳ್ಳುಳ್ಳಿ ಎಸಳು ಬಿಡಿಸಿ, ಒಣ ಕೊಬ್ಬರಿ ತುರಿ ಮಾಡಿಟ್ಟುಕೊಳ್ಳಿ. ಜೀರಿಗೆ ಸ್ವಲ್ಪ ಹುರಿದು ಇಟ್ಟುಕೊಳ್ಳಿ.
ಸಣ್ಣ ಉರಿಯಲ್ಲಿ ಒಂದು ಬಾಣಲೆ ಕಾಯಲು ಇಟ್ಟು, ಒಣ ಕೊಬ್ಬರಿ ತುರಿ ಸ್ವಲ್ಪ ಹುರಿದು ತೆಗೆಯಿರಿ. ನಂತರ ಬೆಳ್ಳುಳ್ಳಿ ಎಸಳು ಸ್ವಲ್ಪ ಹುರಿದು ತೆಗೆಯಿರಿ. ಒಣ ಮೆಣಸಿನ ಕಾಯಿ ತುಂಬು ತೆಗೆದು ಹುರಿದು ತೆಗೆದಿಡಿ.. ಸ್ವಲ್ಪ ಆರಿದ ಮೇಲೆ ಮಿಕ್ಸರ್ ನಲ್ಲಿ ಹಾಕಿ ಉರುಟಾಗಿ(ಉರುಟು ) ಸ್ವಲ್ಪ ಉಪ್ಪು ಮತ್ತು ಕೆಂಪು ಒಣ ಕಾರದ ಪುಡಿ ಸ್ವಲ್ಪ ಹಾಕಿ ರುಬ್ಬಿ ಇಟ್ಟುಕೊಂಡರೆ, ಬೆಳ್ಳುಳ್ಳಿ ಚಟ್ನಿ ಸವಿಯಲು ಸಿದ್ದ.
ಬೆಳ್ಳುಳ್ಳಿ ಚಟ್ನಿಯನ್ನು ಜೋಳದ ರೊಟ್ಟಿ, ಚಪಾತಿ ಇಲ್ಲವೇ ಅನ್ನ ದ ಜೊತೆ ಸವಿಯಿರಿ .
ಇತ್ತೀಚಿನ ಅನಿಸಿಕೆಗಳು