ಕವಿತೆ: ಬೀಳ್ಕೊಡು ಗೆಳೆಯಾ

– ವಿನು ರವಿ.

ಒಲವು, ವಿದಾಯ, Love,

ನೀ ಯಾರೋ ಏನೊ
ಹೇಗೋ ಸಕನಾಗಿ
ಎದೆಯೊಳಗೊಂದು ಸಂಬ್ರಮ ತಂದೆ

ಕಣ್ಣಲ್ಲಿ ಕಾಣದೆ
ಕಿವಿಯಲ್ಲಿ ಕೇಳದೆ
ಮೌನದೊಳಗೆ ಮಾತಾದೆ
ನುಡಿದಶ್ಟು ದೂರಾದೆ
ಕರೆದಶ್ಟು ಕಾಡಿದೆ
ಒಲವ ಚಿಟ್ಟೆ ಹಾರಿಬಿಟ್ಟೆ

ಬಿರಿದ ಸುಮದ ಚೆಲುವಾದೆ
ಗುಡಿಯ ದಿವ್ಯತೆಯ ಸೊಬಗಾದೆ
ಸುಮ್ಮನೆ ಮೂಡುವ ಹಂಬಲಗಳ
ನವಿರಾದ ಗುಂಗಾದೆ

ಗಾಡವಾಗಿ ಆವರಿಸಿರುವ
ನೇಹ ನೋವಾಗಿ ಕಾಡುವ
ಮುನ್ನ ವಿದಾಯ ಹೇಳಿಬಿಡು

ಮತ್ತೆ ಮತ್ತೆ ನೆನಪಾಗಿ
ಬೇಕು ಬೇಡಗಳ
ಸೆರೆಯೊಳಗೆ ಸಿಲುಕುವ
ಮುನ್ನ ತೊರೆದುಬಿಡು ನನ್ನ

ನೆನಪುಗಳ ಮುರಳಿ
ನುಡಿಯುತಿರಲಿ ಮರಳಿ ಮರಳಿ
ಎದೆಯೊಳಗೊಂದು ಮಲ್ಲಿಗೆಯ
ಗಮ ಗಮಿಸಲಿ
ನಿನ್ನಾ ಮೌನ ಕಾಡುತಲೇ
ಇರಲಿರಲಿ ಹಾಗೇ

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: