ಕವಿತೆ: ಕಾದಿರುವೆ ಗೆಳತಿ

– ಸ್ಪೂರ‍್ತಿ. ಎಂ.waiting, ಕಾದಿರುವೆ

ಇನ್ನು ಬಿಟ್ಟಿರಲಾರೆ ಗೆಳತಿ ನಿನ್ನ ಸ್ನೇಹವನ್ನು
ತಡಮಾಡದೆ ನನ್ನೆದುರು ಬರಬಾರದೇನು?

ಅತಿ ದುಕ್ಕದಿ ಕಳೆದೆನು ನನ್ನ ದಿನವನ್ನು
ನೋಡಲಾಗದೆ ನಿನ್ನ ನಗುಮುಕವನ್ನು
ಕೇಳಲಾಗದೆ ನಿನ್ನ ಸವಿನುಡಿಯನ್ನು
ಏನೋ ಕಳೆದುಕೊಂಡಂತೆ ಪರದಾಡಿದೆನು

ನಿನ್ನ ನೆನೆ ನೆನೆದು ತೇವಗೊಂಡಿದೆ ಕಣ್ಣು
ಗೆಳತಿ, ನಿನಗಿನ್ನೂ ಕರುಣೆ ಬಾರದೇನು?
ನಿನ್ನ ಸ್ನೇಹದ ಪ್ರವಾಹದಿ ಮುಳುಗಿದೆ ನಾನು
ಬಂದು ಜೊತೆಗಿದ್ದು ಸಂತೈಸಬಾರದೇನು?

ನಿನ್ನ ಬರುವಿಕೆಗಾಗಿ ಕಾದು ಬಳಲಿದೆನು ನಾನು
ಹೇಳು ಎಶ್ಟು ದಿನ ಹೀಗೇ ಕಾಯಬೇಕಿನ್ನು?
ಈಗಲೂ ಬಾರದೆ ತಡಮಾಡಿದರೆ ನೀನು
ಮುಳುಗಿ ಹೋದೇನು ನಾನು ದುಕ್ಕದ ಕಡಲಲಿನ್ನು

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Shakunthala G R says:

    tumba chennagide?

ಅನಿಸಿಕೆ ಬರೆಯಿರಿ: