ಕವಿತೆ: ನೆನ್ನೆ ಮೊನ್ನೆಯವರೆಗೂ

– ಶಂಕರ್ ಲಿಂಗೇಶ್ ತೊಗಲೇರ್.

ವಿನಾಶ, ಬೂಮಿ, earth, destruction

ನೆನ್ನೆ ಮೊನ್ನೆಯವರೆಗೂ
ಜಿಗಿಯುತ್ತಿದ್ದೆ ಆಕಾಶಕ್ಕೆ
ಹಕ್ಕಿಗಳ ಜಾಗ ಆಕ್ರಮಿಸಿ

ನೆನ್ನೆ ಮೊನ್ನೆಯವರೆಗೂ
ಈಜುತ್ತಿದ್ದೆ ಸಾಗರದಲ್ಲಿ
ಜಲಚರಗಳ ಸ್ತಳವ ಅತಿಕ್ರಮಿಸಿ

ನೆನ್ನೆ ಮೊನ್ನೆಯವರೆಗೂ
ಕಡಿಯುತ್ತಿದ್ದೆ ಕಾನನವ
ಪ್ರಾಣಿಗಳ ನೆಲೆ ಕಬಳಿಸಿ

ನೆನ್ನೆ ಮೊನ್ನೆಯವರೆಗೂ
ತಿನ್ನುತ್ತಿದ್ದೆ ಜೀವಿಗಳನ್ನು
ಜೀವನದ ಕುರುಹು ಅಳಿಸಿ

ನೆನ್ನೆ ಮೊನ್ನೆಯವರೆಗೂ
ಬೀಗುತ್ತಿದ್ದೆ ಅಂತರಿಕ್ಶಕ್ಕೆ
ಉಪಗ್ರಹಗಳನ್ನು ಹಾರಿಸಿ

ನೆನ್ನೆ ಮೊನ್ನೆಯವರೆಗೂ
ಸಾರುತ್ತಿದ್ದೆ ನೀನೆಲ್ಲವನು
ಗೆದ್ದು ಗದ್ದುಗೆ ಏರಿದೆ ಎಂದೆಣಿಸಿ

ಇಂದು ನಿಂತು ನೋಡು ಒಮ್ಮೆ
ಹಿಂತಿರುಗಿ ನೋಡು ಒಮ್ಮೆ
ನೀ ಕಟ್ಟಿದ್ದು ಸೌದವಲ್ಲ, ಗೋರಿ
ನೀ ನಿರ‍್ಮಿಸಿದ್ದು ನಾಡಲ್ಲ, ಸುಡುಗಾಡು

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks