ಕವಿತೆ : ಈ ಬದುಕೆಂಬ ಪುಸ್ತಕದಲ್ಲಿ

ಶಶಾಂಕ್.ಹೆಚ್.ಎಸ್.

ಕುಶಿ, ನಲಿವು, happiness

ಈ ಬದುಕೆಂಬ ಪುಸ್ತಕದಲ್ಲಿ
ನಿನ್ನೆಯೆಂಬುದು ಗತಿಸಿದ ಅದ್ಯಾಯ
ನಾಳೆಯೆಂಬುದು ಮರೀಚಿಕೆಯ ಅದ್ಯಾಯ
ಇವತ್ತು ಎನ್ನುವುದು ಮಾತ್ರ ನಮ್ಮ ಅದ್ಯಾಯ

ನಿನ್ನೆ ಸೋತವನು ನಾಳೆ ಗೆಲ್ಲಬಹುದು
ಇಂದು ಗೆದ್ದವನು ಮುಂದೆ ಸೋಲಬಹುದು
ಇವತ್ತು ಬದುಕಿದ್ದವನು ಕ್ಶಣದಲ್ಲಿ ಸಾಯಬಹುದು
ಅದರೆ ಒಮ್ಮೆ ಸತ್ತವನು ಮತ್ತೆ ಬದುಕಲಾರ
ಸಾವೆಂಬುದು ಮಾತ್ರ ಶಾಶ್ವತ ಮತ್ತು ಅಂತ್ಯ

ಇರುವಶ್ಟು ದಿನ
ಗತಿಸಿದ ಅದ್ಯಾಯಗಳ ಬಗ್ಗೆ ಕೊರಗದೆ
ಮರೀಚಿಕೆಯ ಅದ್ಯಾಯಗಳ ಬಗ್ಗೆ ಆಲೋಚಿಸದೆ
ಇಂದಿನ ಕ್ಶಣಿಕ ಕುಶಿಯೊಂದಿಗೆ
ಜೀವಿಸುವುದೇ ಬದುಕು

( ಚಿತ್ರಸೆಲೆ : timesofindia.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: