ಸಾಬುದಾನಿ ಕೀರು

ಸಾಬುದಾನಿ ಕೀರು Sweet dish
ಬೇಕಾಗುವ ಪದಾರ‍್ತಗಳು:
1 ಲೋಟ ಸಾಬುದಾನಿ
2 ಲೋಟ ನೀರು
3 ಲೋಟ ಹಾಲು
5 – 6 ಗುಲಾಬಿ ಹೂ ದಳ
5 – 6 ಕೇಸರಿ ದಳ
4 ಗೋಡಂಬಿ
3 ಬಾದಾಮಿ
1 ಏಲಕ್ಕಿ
6 ಚಮಚ ಬೆಲ್ಲ ಅತವಾ ಸಕ್ಕರೆ
ಮಾಡುವ ವಿದಾನ:
ಸಾಬುದಾನಿ ತೊಳೆದು ಎರಡು ಲೋಟ ನೀರು ಸೇರಿಸಿ ನಾಲ್ಕು ಗಂಟೆ ಕಾಲ ನೆನೆಯಲು ಇಡಬೇಕು. ನೆನೆದು ನೀರು ಇಂಗಿ ದೊಡ್ಡ ಕಾಳು ಕಾಣುತ್ತವೆ. ಎರಡು ಲೋಟ ನೀರು ಕುದಿಯಲು ಇಟ್ಟು, ಸಾಬುದಾನಿ ಸೇರಿಸಿ ಒಂದು ಕುದಿ ಕುದಿಸಿ . ನಂತರ ಮೂರು ಲೋಟ ಹಾಲು ಸೇರಿಸಿ. ಬೆಲ್ಲ ಸೇರಿಸಿ, ಕತ್ತರಿಸಿದ ಸ್ವಲ್ಪ ಗೋಡಂಬಿ, ಬಾದಾಮಿ ಹಾಕಿ. ಗುಲಾಬಿ ಹೂ ದಳ ಸೇರಿಸಿ, ಕೇಸರಿ ದಳ ಸೇರಿಸಿ ಒಂದು ಕುದಿ ಕುದಿಸಿ ಇಳಿಸಿ. ಏಲಕ್ಕಿ ಪುಡಿ ಸೇರಿಸಿ ಕೈಯಾಡಿಸಿ. ಮೇಲೆ ಅಲಂಕಾರಕ್ಕೆ ಸ್ವಲ್ಪ ಬಾದಾಮಿ ಗೋಡಂಬಿ ಹಾಕಿ. ಈಗ ಸಾಬುದಾನಿ ಕೀರು ಸವಿಯಲು ಸಿದ್ದ. ಆರೋಗ್ಯಕರ ಸಿಹಿ ಕೀರು ಸವಿಯಿರಿ.
(ಸಂಕಶ್ಟಿ ವ್ರತ ಇದ್ದಾಗ ಗಣಪನಿಗೇ ನೈವೇದ್ಯ ಅಂತ ಹೆಚ್ಚಾಗಿ ಇದನ್ನು ಮಾಡುತ್ತಾರೆ.)
(ಚಿತ್ರ ಸೆಲೆ: ಸವಿತಾ

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications