ಕವಿತೆ : ಹಸಿವೆಂಬ ಬೂತ
ಹಸಿವೆಂಬ ಬೂತದ ಹಿಡಿತಕ್ಕೆ ಸಿಲುಕಿ
ಬದುಕಾಗಿಹುದು ಮೂರಾಬಟ್ಟೆ
ಹೊಟ್ಟೆಯೆಂಬ ಪರಮಾತ್ಮನ ಸಂತ್ರುಪ್ತಿಗಾಗಿ
ದುಡಿಯುತ್ತಿರಲು ಮುರಿದು ರಟ್ಟೆ
ಆದರೂ ತಪ್ಪದಾಗಿದೆ ಹಸಿವ ಆರ‍್ತನಾದ
ಬಾಳೆಂಬ ರಣರಂಗದಲಿ
ಹಸಿವೆಂಬ ಅನಾಮಿಕನೊಡನೆ
ಪ್ರತಿನಿತ್ಯ ಯುದ್ದಮಾಡುತಲಿ
ಜೀವವಾಗಿಹುದು ಶಕ್ತಿಹೀನ
ದಿನ ನಿತ್ಯ ಕಣ್ಣೀರು
ತುತ್ತು ಅನ್ನಕ್ಕಾಗಿ
ತೊಟ್ಟು ನೀರಿಗಾಗಿ
ಸಿಕ್ಕರೆ ಸಂತೋಶಕ್ಕಾಗಿ
ಸಿಗದ್ದಿದಾಗ ಹಸಿವಿನಿಂದಾಗಿ
ಹಸಿವೆಂಬ ಬೂತದಿಂದ
ಬೇಕಾಗಿದೆ ಮುಕ್ತಿ
ಬದುಕೆಂಬ ರತವ
ಮುನ್ನಡೆಸಲು ಬೇಕಾಗಿದೆ ಶಕ್ತಿ
ಆದರೂ ನಾ ಅರಿಯಲಾರೆ
ಆ ದೈವದ ಯುಕ್ತಿ
ಹಸಿದ ಹೊಟ್ಟೆ ಹಸಿದಿರಲು
ಲೋಕವಾಗಿಹುದು ಕಗ್ಗತ್ತಲು
( ಚಿತ್ರ ಸೆಲೆ : needpix.com )
ನೈಜತೆ ತುಂಬಿದ ಬರಹ