ಮಾವಿನ ಹಣ್ಣಿನ ಗೊಜ್ಜು

– ಸವಿತಾ.

ಮಾವಿನ ಹಣ್ಣಿನ ಗೊಜ್ಜು, Mango, recipe, dish

ಬೇಕಾಗುವ ಸಾಮಾನುಗಳು

  • ಚಿಕ್ಕ ಮಾವಿನ ಹಣ್ಣು – 6
  • ತೆಂಗಿನಕಾಯಿ ತುರಿ – 1/2
  • ಒಣ ಮೆಣಸಿನ ಕಾಯಿ – 2
  • ಕಡಲೆ ಬೇಳೆ – 1 ಚಮಚ
  • ಉದ್ದಿನ ಬೇಳೆ – 1 ಚಮಚ
  • ಕೊತ್ತಂಬರಿ ಕಾಳು – 1 ಚಮಚ
  • ಮೆಂತೆ ಕಾಳು – 1/4 ಚಮಚ
  • ಸಾಸಿವೆ – 1/4 ಚಮಚ

ಒಗ್ಗರಣೆ ಸಾಮಾನುಗಳು

  • ಸಾಸಿವೆ – 1/4 ಚಮಚ
  • ಜೀರಿಗೆ – 1/4 ಚಮಚ
  • ಇಂಗು – 1/4 ಚಮಚ
  • ಕರಿಬೇವು ಎಲೆ – 5-6
  • ಎಣ್ಣೆ – 3 ಚಮಚ
  • ಒಣ ಮೆಣಸಿನ ಕಾಯಿ – 2
  • ಉಪ್ಪು – ರುಚಿಗೆ ತಕ್ಕಶ್ಟು
  • ಅರಿಶಿಣ – ಸ್ವಲ್ಪ
  • ಹುಣಸೆ ರಸ -1 ಚಮಚ
  • ಬೆಲ್ಲ – 1-2 ಚಮಚ

ಮಾಡುವ ಬಗೆ

ಮಾವಿನ ಹಣ್ಣು ತೊಳೆದು, ಸಿಪ್ಪೆ, ತೊಟ್ಟು ತೆಗೆದುಕೊಳ್ಳಿ. ಮಾವಿನ ರಸ ಮಾಡಿ ಇಟ್ಟುಕೊಳ್ಳಿ. ಗೊಟ್ಟ ಅತವಾ ವಾಟೆ ತೊಳೆದು ರಸ ಮಾತ್ರ ಮಾಡಬಹುದು ಅತವಾ ವಾಟೆಯನ್ನು ಹಾಗೆಯೇ ಉಳಿಸಿಕೊಳ್ಳಬಹುದು. ಒಣ ಮೆಣಸಿನ ಕಾಯಿ, ಕಡಲೆ ಬೇಳೆ, ಉದ್ದಿನ ಬೇಳೆ, ಕೊತ್ತಂಬರಿ ಕಾಳು, ಮೆಂತೆ ಕಾಳು ಮತ್ತು ಸಾಸಿವೆ ಹುರಿದು, ಹಸಿ ಕೊಬ್ಬರಿ ತುರಿ ಸೇರಿಸಿ ಮಿಕ್ಸರ್ ನಲ್ಲಿ ನುಣ್ಣಗೆ ರುಬ್ಬಿಕೊಳ್ಳಿ.

ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಸಾಸಿವೆ ಜೀರಿಗೆ ಇಂಗು, ಕರಿಬೇವು ಹಾಕಿ ಕೈಯಾಡಿಸಿ. ರುಬ್ಬಿದ ಕೊಬ್ಬರಿ ಮಿಶ್ರಣ ಸೇರಿಸಿ ಹುರಿಯಿರಿ. ನಂತರ ಉಪ್ಪು, ಅರಿಶಿಣ ಪುಡಿ ಹಾಕಿ. ಮಾವಿನ ಹಣ್ಣಿನ ರಸ ಸೇರಿಸಿ, ಸ್ವಲ್ಪ ನೀರು ಹಾಕಿ ಒಂದು ಕುದಿ ಕುದಿಸಿ. ಹುಣಸೆ ರಸ ಮತ್ತು ಸ್ವಲ್ಪ ಬೆಲ್ಲ ಹಾಕಿ ಚೆನ್ನಾಗಿ ಕುದಿಸಿ ಇಳಿಸಿ. ಮಾವಿನ ಹಣ್ಣಿನ ಗೊಜ್ಜು ಸವಿಯಲು ಸಿದ್ದ. ಅನ್ನ, ಚಪಾತಿ ಇಲ್ಲವೇ ಪೂರಿ ಜೊತೆ ಸವಿಯಿರಿ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: