ಕವಿತೆ : ಪಾರ‍್ವತಿ ಸುತ

.

ಗಣಪ, ಗಣೇಶ, Ganapa, Lord Ganesha,

ಪಾರ‍್ವತಿ ಕುವರನೆ ಮೋದಕ ಪ್ರಿಯನೆ
ಎಲ್ಲರು ಪೂಜಿಪ ಗಣಪತಿಯೇ

ಮಂಗಳ ಶ್ಲೋಕದಿ ದ್ಯಾನಿಸಿ ಬೆನಕನ
ಕಂಗಳ ದಿವ್ಯದ ನೋಟದಲಿ
ಡಂಗುರ ಬಾರಿಸಿ ಶಂಕವನೂದುತ
ರಂಗದಿ ಮೂಶಿಕ ಓಡುತಲಿ

ಅಮ್ಮನ ಆಗ್ನೆಯ ಪಾಲಿಸಿ ನಿಂತನು
ಸುಮ್ಮನೆ ಹೊರಗಡೆ ವಿಗ್ನೇಶ
ಬಿಮ್ಮನೆ ಬಂದನು ಲೋಕದ ರಕ್ಶಕ
ಚಮ್ಮನೆ ಹೊಡೆಯಲು ಶಿರನಾಶ

ಗಣಗಳ ಪೂಜಿತ ವಿಪ್ರರ ವಂದಿತ
ಗಣಪಗೆ ನಮಿಸುವೆ ಬಕ್ತಿಯಲಿ
ಚಣದಲಿ ಮುಕ್ತಿಯ ನೀಡುವ ಬೆನಕನ
ಮನದೊಳು ನೆನೆಯುವೆ ತೋಶದಲಿ

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *