ವರನ್ ಬಾತ್

– ಸವಿತಾ.

ವರನ್ ಬಾತ್, varan bhat

ಬೇಕಾಗುವ ಸಾಮಾನುಗಳು

  • ಅನ್ನ – 1 ಬಟ್ಟಲು
  • ತೊಗರಿಬೇಳೆ – 1/2 ಬಟ್ಟಲು
  • ಟೊಮೋಟೊ – 3
  • ಕರಿಬೇವು – 10-12 ಎಲೆ
  • ಸಾಸಿವೆ – 1/2 ಚಮಚ
  • ಜೀರಿಗೆ – 1/2 ಚಮಚ
  • ಹಸಿ ಮೆಣಸಿನಕಾಯಿ – 3
  • ಇಂಗು – 1/4 ಚಮಚ
  • ಕೊತ್ತಂಬರಿ ಸೊಪ್ಪು – 2 ಕಡ್ಡಿ
  • ತುಪ್ಪ – 3 ಚಮಚ
  • ಅರಿಶಿಣ ಪುಡಿ -1/4 ಚಮಚ
  • ಉಪ್ಪು – ರುಚಿಗೆ ತಕ್ಕಶ್ಟು

ಮಾಡುವ ಬಗೆ

ಮೊದಲು ಅನ್ನ ಮಾಡಿ ಇಟ್ಟುಕೊಳ್ಳಿ. ಹಸಿ ಮೆಣಸಿನಕಾಯಿಯನ್ನು ಕತ್ತರಿಸಿ ಇಟ್ಟುಕೊಳ್ಳಿ. ತೊಗರಿ ಬೇಳೆ ತೊಳೆದು, ಕತ್ತರಿಸಿದ ಟೊಮೋಟೊ, ಜೊತೆ ಸ್ವಲ್ಪ ಉಪ್ಪು, ಅರಿಶಿಣ ಪುಡಿ ಮತ್ತು ನೀರು ಸೇರಿಸಿ ಮೂರು ಕೂಗು ಕುದಿಸಿ ಇಳಿಸಿ.

ತುಪ್ಪ ಬಿಸಿ ಮಾಡಿ, ಒಗ್ಗರಣೆ ಕೊಡಿ. ಸಾಸಿವೆ, ಜೀರಿಗೆ, ಕರಿಬೇವು, ಕತ್ತರಿಸಿದ ಹಸಿ ಮೆಣಸಿನಕಾಯಿ, ಇಂಗು ಹಾಕಿ ಹುರಿಯಿರಿ. ಕುದಿಸಿದ ಟೊಮೋಟೊ ಬೇಳೆ ಹಾಕಿ ಸ್ವಲ್ಪ ನೀರು ಸೇರಿಸಿ ತಿರುವಿ ಇಳಿಸಿ. ಕತ್ತರಿಸಿದ ಕೊತ್ತಂಬರಿ ಸೊಪ್ಪು ಸ್ವಲ್ಪ ಮೇಲೆ ಹಾಕಿ ಅಲಂಕಾರ ಮಾಡಿ . ಈಗ ವರನ್ ಬಾತ್ ಸವಿಯಲು ಸಿದ್ದ.

ಬೇಳೆ, ಅನ್ನ, ತುಪ್ಪದ ಜೊತೆ ಸವಿಯಿರಿ. ಗಣೇಶ ಚತುರ‍್ತಿಗೆ ಪ್ರಸಾದ ವಾಗಿ ಮಹಾರಾಶ್ಟ್ರ ದಲ್ಲಿ ವರನ್ ಬಾತ್ ಮಾಡುವ ರೂಡಿ ಇದೆ.

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. ಸುಮಾ says:

    ವರನ್ ಬಾತ್ ಎರಡು ಮರಾಠಿ ಶಬ್ದಗಳು… ತೊವ್ವೆ ಅನ್ನ ಅಂತಾರ ಕನ್ನಡದಾಗ

ಸುಮಾ ಗೆ ಅನಿಸಿಕೆ ನೀಡಿ Cancel reply

Enable Notifications OK No thanks