ಕಾರದ ಕಡ್ಡಿ (ಸೇವ್)

– ಸವಿತಾ.

 

karada kaddi, ಕಾರದ ಕಡ್ಡಿ

ಬೇಕಾಗುವ ಸಾಮಾನುಗಳು

  • ಕಡಲೆಹಿಟ್ಟು – 1 ಬಟ್ಟಲು
  • ಅಜವಾನ ಅತವಾ ಓಂ ಕಾಳು – 1/4 ಚಮಚ
  • ಜೀರಿಗೆ – 1/4 ಚಮಚ
  • ಒಣ ಕಾರದ ಪುಡಿ – 1/2 ಚಮಚ
  • ಇಂಗು – 1/4 ಚಮಚ
  • ಉಪ್ಪು – ರುಚಿಗೆ ತಕ್ಕಶ್ಟು
  • ಎಣ್ಣೆ – ಕರಿಯಲು

ಮಾಡುವ ಬಗೆ

ಕಡಲೆ ಹಿಟ್ಟಿಗೆ ಕಾದ ಎಣ್ಣೆ, ಓಂ ಕಾಳು, ಜೀರಿಗೆ ಒಣ ಕಾರದ ಪುಡಿ, ಇಂಗು, ಉಪ್ಪು , ಸ್ವಲ್ಪ ನೀರು ಸೇರಿಸಿ ಗಟ್ಟಿಯಾಗಿ ಕಲಸಿ ಇಟ್ಟುಕೊಳ್ಳಿ.

ಕರಿಯಲು ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ, ಚಕ್ಕುಲಿ ಒರಳಿನಲ್ಲಿ ಹಿಟ್ಟು ಹಾಕಿ ಕಾದ ಎಣ್ಣೆಗೆ ಬಿಟ್ಟು ಕರಿಯಿರಿ. ಕಾರದ ಕಡ್ಡಿ (ಸೇವ್) ತಯಾರು.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: