ಕವಿತೆ : ಕೊನೆಯಾಗಲಿ ಕೊರೊನಾ
ನೀ ಮಹಾಮಾರಿಯೋ
ಮರಣದ ರಾಯಬಾರಿಯೋ ತಿಳಿಯದು
ಕೊರೊನಾ ನಿನ್ನ ಕೀಟಲೆಗೆ
ಕೊನೆ ಎಂದಿಗೋ ತೋಚದು
ಸದ್ದಿಲ್ಲದೆ ನುಗ್ಗಿ ಬಂದು
ಜೀವಗಳ ಸಾಲಾಗಿ ನುಂಗುತಿಹೆ
ಸಂತಸದ ಬೆಳ್ಳಿ ಮೋಡ ಚದುರಿ
ದುಕ್ಕದ ಕಾರ‍್ಮೋಡ ಕವಿದಿಹೆ
ಎಲ್ಲೆ ಇಲ್ಲದ ನಿನ್ನ ಆಟಕ್ಕೆ
ವಿದಿಯು ಜೊತೆಗೂಡಿದಂತಿದೆ
ಜೀವನ ಪಯಣದ ಹಾದಿಯಲ್ಲಿ
ಮೂಕ ಮೌನ ಆವರಿಸಿದೆ
ನಿನ್ನಾರ‍್ಬಟ ಅಂತ್ಯವಾಗಿ
ಮರಣ ಮ್ರುದಂಗವು ನಿಲ್ಲಲಿ
ಬಾಡಿದ ಬಾಳ ಬಳ್ಳಿಯಲ್ಲಿ
ಹೊಸ ಚಿಗುರು ಮೂಡಲಿ
( ಚಿತ್ರಸೆಲೆ : wiki )
ಇತ್ತೀಚಿನ ಅನಿಸಿಕೆಗಳು