ಮಂಗಳೂರು ಬನ್ಸ್
– ಸವಿತಾ.
ಬೇಕಾಗುವ ಸಾಮಾನುಗಳು
- ಗೋದಿ ಹಿಟ್ಟು – 2 ಲೋಟ (ಬೇಕಿದ್ದರೆ)
- ಮೈದಾ ಹಿಟ್ಟು – 1 ಲೋಟ
- ಬಾಳೆಹಣ್ಣು – 2
- ಮೊಸರು – 1/2 ಲೋಟ
- ಉಪ್ಪು – 1/2 ಚಮಚ
- ಬೆಲ್ಲದ ಪುಡಿ – 3 ಚಮಚ
- ಜೀರಿಗೆ ಪುಡಿ – 1/2 ಚಮಚ
- ಅಡುಗೆ ಸೋಡಾ – 1/4 ಚಮಚ
- ಎಣ್ಣೆ – 2 ಚಮಚ
- ಕರಿಯಲು ಎಣ್ಣೆ
ಮಾಡುವ ಬಗೆ
ಮೈದಾ ಹಿಟ್ಟು ಮತ್ತು ಗೋದಿ ಹಿಟ್ಟನ್ನು ಒಂದು ಪಾತ್ರೆಯಲ್ಲಿ ಹಾಕಿ. ಬೇಕಿದ್ದರೆ ಕೇವಲ ಮೈದಾ ಹಿಟ್ಟು ಬಳಸಿಕೊಳ್ಳಬಹುದು. ಬಾಳೆಹಣ್ಣಿನ ಸಿಪ್ಪೆ ತೆಗೆದು ಸಣ್ಣಗೆ ಕತ್ತರಿಸಿ ಮಿಕ್ಸರ‍್ ನಲ್ಲಿ ನುಣ್ಣಗೆ ರುಬ್ಬಿ ಅತವಾ ಕೈಯಿಂದ ಕಿವುಚಿ ಪೇಸ್ಟ್ ಮಾಡಿ ಕಲಸಿ. ಮೊಸರು, ಸ್ವಲ್ಪ ಉಪ್ಪು, ಬೆಲ್ಲದ ಪುಡಿ, ಜೀರಿಗೆ ಪುಡಿ ಮತ್ತು ಸ್ವಲ್ಪ ಅಡುಗೆ ಸೋಡಾ ಸೇರಿಸಿ ಚೆನ್ನಾಗಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ. ನಂತರ ಸ್ವಲ್ಪ ಎಣ್ಣೆ ಸವರಿ, ಒಂದು ಮುಚ್ಚಳ ಮುಚ್ಚಿ ರಾತ್ರಿ ಇಟ್ಟುಕೊಳ್ಳಿ, ಬೆಳಿಗ್ಗೆ ಪೂರಿ ಆಕಾರಕ್ಕೆ ಸ್ವಲ್ಪ ದಪ್ಪಗೆ ಲಟ್ಟಿಸಿ ಕಾದ ಎಣ್ಣೆಯಲ್ಲಿ ಒಂದೊಂದೇ ಕರಿಯಿರಿ. ಈಗ ಮಂಗಳೂರು ಬನ್ಸ್ ಸವಿಯಲು ಸಿದ್ದ. ಕೊಬ್ಬರಿ ಚಟ್ನಿ ಜೊತೆ ಸವಿಯಿರಿ.
(ಚಿತ್ರ ಸೆಲೆ: wikimedia.org)
ಇತ್ತೀಚಿನ ಅನಿಸಿಕೆಗಳು