ತುಪ್ಪದ ಅನ್ನ
– ಸವಿತಾ.
ಬೇಕಾಗುವ ಸಾಮಾನುಗಳು
- ಅಕ್ಕಿ -1 ಲೋಟ
- ತುಪ್ಪ – 3 ಚಮಚ
- ಸಾಸಿವೆ – 1/2 ಚಮಚ
- ಜೀರಿಗೆ – 1/2 ಚಮಚ
- ಉದ್ದಿನ ಬೇಳೆ – 1/2 ಚಮಚ
- ಕಡಲೇ ಬೇಳೆ – 1/2 ಚಮಚ
- ಕರಿಬೇವು -10 ಎಲೆ
- ಒಣ ಮೆಣಸಿನ ಕಾಯಿ – 3
- ಇಂಗು – 1/4 ಚಮಚ
- ತೆಂಗಿನಕಾಯಿ ತುರಿ – 1/2 ಬಟ್ಟಲು
- ಗೋಡಂಬಿ – 10
- ಒಣ ದ್ರಾಕ್ಶಿ – 6
- ಉಪ್ಪು – ರುಚಿಗೆ ತಕ್ಕಶ್ಟು
- ಸ್ವಲ್ಪ ಕೊತ್ತಂಬರಿ ಸೊಪ್ಪು
ಮಾಡುವ ಬಗೆ
ಅಕ್ಕಿ ತೊಳೆದು ಅನ್ನ ಮಾಡಿ ಇಟ್ಟುಕೊಳ್ಳಿ. ತುಪ್ಪ ಬಿಸಿ ಮಾಡಿ, ಗೋಡಂಬಿ, ಒಣ ದ್ರಾಕ್ಶಿ ಹುರಿದು ತೆಗೆದಿಡಿ. ಅದೇ ತುಪ್ಪದಲ್ಲಿ ಸಾಸಿವೆ, ಜೀರಿಗೆ, ಕರಿಬೇವು, ಇಂಗು ಮತ್ತು ಒಣ ಮೆಣಸಿನ ಕಾಯಿಯನ್ನು ಮುರಿದು ಹಾಕಿ ಹುರಿಯಿರಿ. ಉದ್ದಿನ ಬೇಳೆ, ಕಡಲೇ ಬೇಳೆ ಕಾಲು ಬಟ್ಟಲು, ಮತ್ತು ತೆಂಗಿನ ಕಾಯಿ ತುರಿ ಸೇರಿಸಿ ಹುರಿದು ಒಲೆ ಆರಿಸಿ. ಉಪ್ಪು ರುಚಿಗೆ ತಕ್ಕಶ್ಟು ಸೇರಿಸಿ. ಹುರಿದ ಗೋಡಂಬಿ, ಒಣ ದ್ರಾಕ್ಶಿ ಸೇರಿಸಿ ಇನ್ನೊಮ್ಮೆ ಕಲಸಿ. ಮಾಡಿಟ್ಟ ಅನ್ನ ಸೇರಿಸಿ ಚೆನ್ನಾಗಿ ಕಲಸಿ. ಇದರ ಮೇಲೆ ಸ್ವಲ್ಪ ತೆಂಗಿನ ತುರಿ ಮತ್ತು ಕತ್ತರಿಸಿದ ಕೊತ್ತಂಬರಿ ಸೊಪ್ಪು ಹಾಕಿ ಅಲಂಕಾರ ಮಾಡಿ. ಈಗ ತುಪ್ಪದ ಅನ್ನ ಸವಿಯಲು ಸಿದ್ದ.
ಇತ್ತೀಚಿನ ಅನಿಸಿಕೆಗಳು