ಆಲೂಗಡ್ಡೆ ಬೋಂಡಾ

– ಸವಿತಾ.

ಆಲೂಗಡ್ಡೆ ಬೋಂಡ, potato bonda

ಬೇಕಾಗುವ ಸಾಮಾನುಗಳು

  • ಆಲೂಗಡ್ಡೆ – 4
  • ಕಡಲೇ ಹಿಟ್ಟು – 2 ಬಟ್ಟಲು
  • ಅಕ್ಕಿ ಹಿಟ್ಟು – 2 ಚಮಚ
  • ಕಾದ ಎಣ್ಣೆ – 1 ಚಮಚ
  • ಒಣ ಕಾರದ ಪುಡಿ – 1 ಚಮಚ
  • ಅಡುಗೆ ಸೋಡಾ – ಒಂದು ಚಿಟಿಕೆ
  • ಸಾಸಿವೆ – 1/4 ಚಮಚ
  • ಹಸಿ ಮೆಣಸಿನಕಾಯಿ – 4
  • ಉಪ್ಪು – ರುಚಿಗೆ ತಕ್ಕಶ್ಟು
  • ಕೊತ್ತಂಬರಿ ಸೊಪ್ಪು – ಸ್ವಲ್ಪ
  • ಅರಿಶಿಣ ಪುಡಿ – ಸ್ವಲ್ಪ
  • ಎಣ್ಣೆ – ಒಗ್ಗರಣೆ ಮಾಡಲು ಮತ್ತು ಕರಿಯಲು

ಮಾಡುವ ಬಗೆ

ಆಲೂಗಡ್ಡೆ ಕುದಿಸಿ ಇಳಿಸಿ, ನಂತರ ಸಿಪ್ಪೆ ಸುಲಿದು ಕಿವುಚಿ ಇಟ್ಟುಕೊಳ್ಳಿ. ಎರಡು ಚಮಚ ಎಣ್ಣೆ ಬಿಸಿ ಮಾಡಿ, ಸಾಸಿವೆ, ಕತ್ತರಿಸಿದ ಹಸಿ ಮೆಣಸಿನಕಾಯಿ, ಉಪ್ಪು ಮತ್ತು ಸ್ವಲ್ಪ ಅರಿಶಿಣ ಪುಡಿ ಸೇರಿಸಿ ಚೆನ್ನಾಗಿ ಹುರಿದು ಆಲೂಗಡ್ಡೆ ಸೇರಿಸಿ ಕೈಯಾಡಿಸಿ ಇಳಿಸಿ. ಸ್ವಲ್ಪ ಕತ್ತರಿಸಿದ ಕೊತ್ತಂಬರಿ ಸೊಪ್ಪು ಸೇರಿಸಿ. ಆರಿದ ನಂತರ ಸಣ್ಣ ಸಣ್ಣ ಉಂಡೆ ಮಾಡಿ ಇಟ್ಟುಕೊಳ್ಳಿ.

ಕಡಲೇ ಹಿಟ್ಟು ಮತ್ತು ಅಕ್ಕಿ ಹಿಟ್ಟು, ಸ್ವಲ್ಪ ನೀರು, ಉಪ್ಪು ರುಚಿಗೆ ತಕ್ಕಶ್ಟು, ಒಣ ಕಾರದ ಪುಡಿ, ಕಾದ ಎಣ್ಣೆ ಮತ್ತು ಸ್ವಲ್ಪ ಅಡುಗೆ ಸೋಡಾ ಹಾಕಿ ಚೆನ್ನಾಗಿ ಕಲಸಿ ಬೋಂಡಾ ಹಿಟ್ಟು ತಯಾರಿಸಿ. ತಯಾರಿ ಮಾಡಿಟ್ಟ ಆಲೂಗಡ್ಡೆ ಉಂಡೆಯನ್ನು ಹಿಟ್ಟಿನಲ್ಲಿ ಅದ್ದಿ ಕಾದ ಎಣ್ಣೆಯಲ್ಲಿ ಕರಿಯಿರಿ. ಈಗ ಆಲೂ ಬೋಂಡಾ ಸವಿಯಲು ಸಿದ್ದ. ಸಾಸ್ ಅತವಾ ಹಸಿರು ಚಟ್ನಿ ಜೊತೆ, ಅತವಾ ಹಾಗೆಯೇ ಆಲೂಗಡ್ಡೆ ಬೋಂಡಾ ಸವಿಯಿರಿ.

(ಚಿತ್ರ ಸೆಲೆ: wikimedia.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: