ಬಿಸಿ ಬೇಳೆ ಬಾತ್
– ಸವಿತಾ.
ಬೇಕಾಗುವ ಸಾಮಾನುಗಳು
- ಅಕ್ಕಿ – 1 ಬಟ್ಟಲು
- ತೊಗರಿಬೇಳೆ – 1 ಬಟ್ಟಲು
- ತುಪ್ಪ ಅತವಾ ಎಣ್ಣೆ – 1 ಬಟ್ಟಲು
- ಸಾಸಿವೆ – 1 ಚಮಚ
- ಜೀರಿಗೆ – 1 ಚಮಚ
- ಒಣ ಮೆಣಸಿನ ಕಾಯಿ – 2
- ಒಣ ಕಾರದ ಪುಡಿ – 1 ಚಮಚ
- ಕರಿಬೇವು – 10 ಎಲೆ
- ಗೋಡಂಬಿ – 10
- ಕ್ಯಾರೆಟ್ (ಗಜ್ಜರಿ) – 1
- ಬೀನ್ಸ್ – 8
- ಆಲೂಗಡ್ಡೆ – 1
- ಈರುಳ್ಳಿ – 2
- ಟೊಮೋಟೊ – 2
- ಹಸಿ ಬಟಾಣಿ – 1/2 ಬಟ್ಟಲು
- ಹುಣಸೇ ರಸ – 2 ಚಮಚ
- ಅರಿಶಿಣ ಪುಡಿ – ಸ್ವಲ್ಪ
- ಉಪ್ಪು – ರುಚಿಗೆ ತಕ್ಕಶ್ಟು
- ಬಿಸಿ ಬೇಳೆ ಬಾತ್ ಪುಡಿ
ಬಿಸಿ ಬೇಳೆ ಬಾತ್ ಪುಡಿ ಮಾಡುವ ಬಗೆ
- ಮೆಂತ್ಯ ಕಾಳು – 1/2 ಚಮಚ
- ಕಡಲೇ ಬೇಳೆ – 1 ಚಮಚ
- ಉದ್ದಿನ ಬೇಳೆ – 1 ಚಮಚ
- ಜೀರಿಗೆ – 1 ಚಮಚ
- ಗಸಗಸೆ – 1/2 ಚಮಚ
- ಏಲಕ್ಕಿ – 2
- ಲವಂಗ – 1
- ಚಕ್ಕೆ – 1/2 ಇಂಚು
- ಮೆಣಸಿನ ಕಾಳು – 4 ಕರಿ
- ಒಣ ಕೊಬ್ಬರಿ ತುರಿ – 1/2 ಬಟ್ಟಲು
- ಹಸಿ ಕೊಬ್ಬರಿ ತುರಿ – ಸ್ವಲ್ಪ
ಮೇಲ್ಕಂಡ ಸಾಮಾನುಗಳನ್ನು ಹುರಿದು ಪುಡಿ ಮಾಡಿ ಇಟ್ಟುಕೊಳ್ಳಿ.
ಬಿಸಿ ಬೇಳೆ ಬಾತ್ ಮಾಡುವ ಬಗೆ
ಸಿಪ್ಪೆ ತೆಗೆದು ತರಕಾರಿಗಳನ್ನು ಹೆಚ್ಚಿ ಇಟ್ಟುಕೊಳ್ಳಿ. ಈರುಳ್ಳಿ ಮತ್ತು ಟೊಮೋಟೊ ಕತ್ತರಿಸಿ ಬೇರೆ ಇಟ್ಟುಕೊಳ್ಳಿ. ಒಂದು ಪಾತ್ರೆಯಲ್ಲಿ ನೀರು ಕುದಿಸಿ ಕತ್ತರಿಸಿದ ಆಲೂಗೆಡ್ಡೆ, ಬೀನ್ಸ್, ಕ್ಯಾರೆಟ್ ಮತ್ತು ಹಸಿ ಬಟಾಣಿ ಹಾಕಿ ಸ್ವಲ್ಪ ಕುದಿಸಿ ಇಳಿಸಿ. ತೊಗರಿ ಬೇಳೆ ಕುಕ್ಕರ್ ನಲ್ಲಿ ಮೂರು ಕೂಗು ಕುದಿಸಿ ಇಳಿಸಿ. ಬಾಣಲೆ ಒಲೆಯ ಮೇಲಿಟ್ಟು ಸ್ವಲ್ಪ ಎಣ್ಣೆ ಅತವಾ ತುಪ್ಪ ಹಾಕಿ, ಸಾಸಿವೆ, ಜೀರಿಗೆ, ಕರಿಬೇವು ಮತ್ತು ಎರಡು ಒಣ ಮೆಣಸಿನ ಕಾಯಿ ಮುರಿದು ಹಾಕಿ. ಗೋಡಂಬಿ ಮತ್ತು ಈರುಳ್ಳಿ ಹಾಕಿ ಹುರಿದು ನಂತರ, ಕತ್ತರಿಸಿದ ಟೊಮೋಟೊ ಹಾಕಿ ಹುರಿದು, ಕುದಿಸಿದ ತರಕಾರಿ, ಅನ್ನ, ತೊಗರಿ ಬೇಳೆ ಹಾಕಿ ಕೈಯಾಡಿಸಿ.
ಬಿಸಿ ಬೇಳೆ ಬಾತ್ ಪುಡಿ ಸೇರಿಸಿ ನಂತರ ಎರಡು ಚಮಚ ಹುಣಸೇ ರಸ, ಒಂದು ಚಮಚ ಒಣ ಕಾರದ ಪುಡಿ, ಉಪ್ಪು ಮತ್ತು ಅರಿಶಿಣ ಪುಡಿ ಹಾಕಿ ಸ್ವಲ್ಪ ನೀರು ಸೇರಿಸಿ ಒಂದು ಕುದಿ ಕುದಿಸಿ ಇಳಿಸಿ. ಈಗ ಬಿಸಿ ಬೇಳೆ ಬಾತ್ ಸವಿಯಲು ಸಿದ್ದ.
ಇತ್ತೀಚಿನ ಅನಿಸಿಕೆಗಳು