ಕವಿತೆ: ಹೊಸ ವರುಶ ತರಲಿ ಹರುಶ

– .

ಹೊಸ ವರುಶ, new year, 2021

ದಿವಸ, ವಾರ, ತಿಂಗಳುಗಳು ಉರುಳಿದೆ
ಹೊಸ ವರ‍್ಶ ಹೊಸ ಹರ‍್ಶದಿ ಮರಳಿದೆ
ಎರಡು ಸಾವಿರದ ಇಪ್ಪತ್ತೊಂದರ ಇಸವಿ ಬಂದಿದೆ
ನೂರಾರು ಕನಸು ಬರವಸೆಗಳ ಹೊತ್ತು ತಂದಿದೆ

ಜನವರಿಯು ಜನರ ವರಿಗಳ ದೂರ ಮಾಡಲಿ
ಪೆಬ್ರವರಿಯು ಪ್ರೀತಿ ಪ್ರೇಮವ ಮೂಡಿಸಲಿ
ಮಾರ‍್ಚ್ ಸುಕ ಶಾಂತಿ ನೆಮ್ಮದಿ ಹರಡಲಿ
ಏಪ್ರಿಲ್ ಸ್ನೇಹ ಸಹಬಾಳ್ವೆಯನು ತರಲಿ

ಮೇ ಮೇಲು ಕೀಳೆಂಬ ಬೇದ ತೊಲಗಿಸಲಿ
ಜೂನ್ ಎಲ್ಲರು ಒಂದೆಂಬ ಬಾವ ಬೆಳೆಸಲಿ
ಜುಲೈ ಜನರ ಬಾಳನು ಬಂಗಾರವಾಗಿಸಲಿ
ಆಗಸ್ಟ್ ನಾನೆಂಬ ಅಹಂಕಾರ ದೂರಾಗಿಸಲಿ

ಸೆಪ್ಟೆಂಬರ್ ಸಹೋದರತೆಯ ಸಾರ ಸಾರಲಿ
ಅಕ್ಟೋಬರ್ ಅದರ‍್ಮ ಅಸತ್ಯವ ಅಳಿಸಲಿ
ನವೆಂಬರ್ ನ್ಯಾಯ ನೀತಿ ಜಗದಿ ಬೆಳಗಲಿ
ಡಿಸೆಂಬರ್ ದೌರ‍್ಜನ್ಯಗಳ ಸುಟ್ಟು ಹಾಕಲಿ

ಹೊಸ ವರುಶ ತರಲಿ ಹರುಶವ ಬಾಳಲಿ
ಹೊಸ ಆಸೆ ಕನಸುಗಳೆಲ್ಲವು ಈಡೇರಲಿ
ಕ್ರುಶಿಕ ಸೈನಿಕ ಕಾರ‍್ಮಿಕರ ಬಾಳು ಹಸನಾಗಲಿ
2021 ಕುಶಿ ನಗುವ ಜನರಲಿ ತುಂಬಲಿ

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

2 Responses

  1. Raghuramu N.V. says:

    ಚೆನ್ನಾಗಿದೆ

  2. shivamurthy H says:

    ದನ್ಯವಾದಗಳು ಸರ್

ಅನಿಸಿಕೆ ಬರೆಯಿರಿ: