ಕವಿತೆ : ಹೊಸ ವರುಶವ ಸ್ವಾಗತಿಸೋಣ

– ಶ್ಯಾಮಲಶ್ರೀ.ಕೆ.ಎಸ್.

ಹೊಸ ವರುಶ, new year

ಕಹಿ ನೆನಪುಗಳ ಸುಟ್ಟು
ಸಿಹಿ ಬಾವನೆಗಳ ನೆಟ್ಟು
ಹೊಂಗನಸುಗಳ ನನಸಾಗಿಸುವತ್ತ ಹೆಜ್ಜೆ ಹಾಕೋಣ

ಹುಣ್ಣಿಮೆಯ ಹೊಂಬಣ್ಣದಂತೆ
ಹೊಳೆವ ರವಿಯ ರಶ್ಮಿಯಂತೆ
ಬಾಳನ್ನು ಬಂಗಾರವಾಗಿಸುವತ್ತ ಹೆಜ್ಜೆ ಹಾಕೋಣ

ಬೇಸರಕ್ಕೆ ಬೇಲಿ ಹಾಕಿ
ನಿರಾಶೆಗೆ ಬೇಡಿ ಹಾಕಿ
ವಾಸ್ತವದ ಬದುಕಿನೆಡೆಗೆ ಹೆಜ್ಜೆ ಹಾಕೋಣ

ಸವಾಲುಗಳ ಎದುರಿಸಿ
ಗೆಲುವಿನ ಕಿರೀಟ ಮುಡಿಗೇರಿಸಿ
ಉತ್ಸಾಹದ ಆಶಾವಾದಿಗಳಾಗುವತ್ತ ಹೆಜ್ಜೆ ಹಾಕೋಣ

ಬೊಗಸೆ ತುಂಬಾ ನಗುವನಿಟ್ಟು
ಕಣ್ಣಂಚಿನಲ್ಲಿ ಅಳುವ ಬಚ್ಚಿಟ್ಟು
ಸಂತಸವ ಹಂಚುವತ್ತ ಹೆಜ್ಜೆ ಹಾಕೋಣ

ಹಳೆಯ ವರ‍್ಶಕ್ಕೆ ವಿದಾಯ ಹೇಳುತ್ತಾ
ಹೊಸವರ‍್ಶವ ಸ್ವಾಗತಿಸುತ್ತಾ
ಹೊಸ ಹುರುಪಿನಿಂದ ಹೊಸ ಜೀವನದತ್ತ ಹೆಜ್ಜೆ ಹಾಕೋಣ
ನಾವು ಹೆಜ್ಜೆ ಹಾಕೋಣ

( ಚಿತ್ರ ಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: