ಕವಿತೆ : ನಾ ಮಾತಾಡದೆ ಬಿಡೆನಲ್ಲ

ವಿನು ರವಿ.

ನಾನಿದ್ದೆ ನನ್ನ ಪಾಡಿಗೆ
ನೀನೇಕೆ ಬಂದೆ ನನ್ನದೆ ಗೂಡಿಗೆ
ನೀ ನಡೆದು ಬಂದ ಸದ್ದಿಗೆ
ಮೈಮರೆತು ನಡೆದೆ ನಿನ್ನೆಡೆಗೆ

ಹತ್ತಿರ ಬರಲು ಇಲ್ಲ
ದೂರ ಸರಿಯಲೂ ಇಲ್ಲ
ಹೇಳಿದಂಗೆ ಕೇಳಲಿಲ್ಲ
ಆದರೂ ನಿತ್ಯ ಕಾಡಿದೆಯಲ್ಲ

ಏನೇನೂ ಮಾತಾಡಲಿಲ್ಲ
ಜೊತೆಯಲಿ ಹೆಜ್ಜೆ ಹಾಕಲಿಲ್ಲ
ಮತ್ತೆ ಮತ್ತೆ ಬೇಟಿ ಆಗಲಿಲ್ಲ
ಆದರೂ ಸ್ನೇಹ ಬಿಡಲಿಲ್ಲ

ನೀ ಏನಾದರೂ ಯೋಚಿಸು ನಲ್ಲ
ನಾ ದೂರಗದೆ ಉಳಿಯುವವಳಲ್ಲ
ನೀ ಮೌನವಾಗುಳಿದರೂ
ನಾ ಮಾತಾಡದೆ ಬಿಡೆನಲ್ಲ

( ಚಿತ್ರ ಸೆಲೆ: theguardian.com )

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Sachin.H.J Jayanna says:

    ಚನಾಗಿದೆ‌:)

ಅನಿಸಿಕೆ ಬರೆಯಿರಿ: