ಹನಿಗವನಗಳು

ಕಿರುಗತೆಗಳು, ಪುಟ್ಟಕತೆಗಳು, Nano Stories, Short Stories

*** ಅಬಿಮಾನಿ ***

ನಾ ನಿನ್ನ
ಅಬಿಮಾನಿ ಎನ್ನಲು
ಹೆಮ್ಮೆ ಇದೆ ನನಗೆ
ನೀ ಯಾರೋ ಎನ್ನದಿರು
ಈ ಹ್ರುದಯ
ಅನಾತವಾಗದಿರಲಿ
ಕೊನೆಗೆ

*** ಕಣ್ಣೋಟ ***

ಆ ನಿನ್ನ ಕಣ್ಣೋಟವು
ನನಗೆ ಮಾತ್ರ
ತುಂಬಾ ವಿಶೇಶ
ಈ ದೇಹ
ಸುಟ್ಟು ಹೋದರೂ
ನಿನ್ನ ಕಣ್ಣೋಟವೇ
ನನ್ನ ಕೊನೆಯ ಅವಶೇಶ

*** ನಾಕುತಂತಿ ***

ನನ್ನ ಅಂತರಂಗದಲ್ಲಿ
ನಾಕುತಂತಿಯ
ಮೀಟಿರುವವಳು ನೀನು;
ಅಪಸ್ವರಗಳ ಚಿಂತೆ ನನಗಿಲ್ಲ
ನಿನ್ನ ರಾಗಕೆ
ನನ್ನ ಹ್ರುದಯ ಬಡಿತವೇ
ಆನು ತಾನು

*** ದೂರ ***

ನೀನೇನೆ ಹೇಳು
ನಿನ್ನಿಂದ ನಾನು
ದೂರವಾಗಲಾರೆ;
ನನ್ನಿಂದ ನೀನು
ದೂರವಾದರೂ
ನಾನೆಂದು ನಿನ್ನ
ದೂರಲಾರೆ

*** ಬಾವನೆ ***

ನನ್ನ ಮನದ
ನೂರಾರು ಬಾವನೆಗಳು
ಎಂದಿಗೂ ಕಾಣವು ಲಿಕಿತ;
ನೂರಾರು ಪುಟಗಳ
ಕಲ್ಪನೆಗಳಿದ್ದರೂ,
ಕೊನೆಯಲ್ಲಿ ಇರಲೇಬೇಕು
ನಿನ್ನದೇ ಅಂಕಿತ

*** ಸುಕ ದುಕ್ಕ ***

ನಿನ್ನ ಸುಕ-ದುಕ್ಕಗಳು
ಏನೇ ಇರಲಿ
ಅವುಗಳೆಲ್ಲ ನನಗೆ ಸ್ವಗತ;
ನನ್ನ ಜೀವನದ ಬಾಗಿಲಲ್ಲಿ,
ಸದಾ ನಿನಗಾಗಿ
ಕಾಯುತ್ತಾ ಹೇಳುವೆ
ಸ್ವಾಗತ

*** ಕನಸು ***

ನನ್ನ ನೂರಾರು
ಕನಸುಗಳಲ್ಲಿ
ನೀನೇ ನನ್ನ ಚಂದ್ರಮುಕಿ;
ನೂರಾರು ಜನ್ಮಗಳೇ ಬರಲಿ
ಎಲ್ಲಾ ಜನ್ಮಗಳಲ್ಲೂ
ನೀನೆ ನನ್ನ ಪ್ರಾಣಸಕಿ

(ಚಿತ್ರಸೆಲೆ : professionalstudies.educ.queensu.ca)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Raghuramu N.V. says:

    ಚೆನ್ನಾಗಿದೆ ಸರ್

ಅನಿಸಿಕೆ ಬರೆಯಿರಿ: