ಮಜ್ಜಿಗೆ ರಸಂ

– ಸವಿತಾ.

ಮಜ್ಜಿಗೆ ರಸಂ, majjige rasam

ಬೇಕಾಗುವ ಸಾಮಾನುಗಳು

 • ಮೊಸರು – 2 ಬಟ್ಟಲು
 • ನೀರು – 2 ಲೋಟ
 • ಸಾಸಿವೆ – 1/2 ಚಮಚ
 • ಜೀರಿಗೆ – 1/2 ಚಮಚ
 • ಕರಿಬೇವು – 10-12 ಎಲೆ
 • ಒಣ ಮೆಣಸಿನಕಾಯಿ – 1
 • ಇಂಗು – 1/4 ಚಮಚ
 • ಮೆಂತೆ ಪುಡಿ – 1 ಚಮಚ
 • ಅರಿಶಿಣ ಪುಡಿ- 1/4 ಚಮಚ
 • ಹಸಿ ಮೆಣಸಿನಕಾಯಿ – 2
 • ತುಪ್ಪ – 2 ಚಮಚ
 • ಕೊತ್ತಂಬರಿ ಸೊಪ್ಪು – ಸ್ವಲ್ಪ
 • ಉಪ್ಪು – ರುಚಿಗೆ ತಕ್ಕಶ್ಟು

ಮಾಡುವ ಬಗೆ

ಒಂದು ಲೋಟ ನೀರು ಕುದಿಯಲು ಇಟ್ಟು, ಉಪ್ಪು, ಅರಿಶಿಣ, ಮೆಂತೆ ಕಾಳು ಹುರಿದು ಪುಡಿ ಮಾಡಿ ಹಾಕಿ. ಹಸಿ ಮೆಣಸಿನಕಾಯಿ ಕತ್ತರಿಸಿ ಸೇರಿಸಿ ಒಂದು ಕುದಿ ಕುದಿಸಿ ಒಲೆ ಆರಿಸಿ. ಮೊಸರಿಗೆ ಸ್ವಲ್ಪ ನೀರು ಸೇರಿಸಿ ಮಜ್ಜಿಗೆ ಮಾಡಿ ಕುದಿಸಿದ ನೀರಿಗೆ ಸೇರಿಸಿ.

ಬಾಣಲೆಗೆ ತುಪ್ಪ ಹಾಕಿ ಬಿಸಿ ಮಾಡಿ. ಸಾಸಿವೆ, ಜೀರಿಗೆ, ಇಂಗು, ಕರಿಬೇವು, ಒಣ ಮೆಣಸಿನಕಾಯಿ ಮುರಿದು ಹಾಕಿ ಒಗ್ಗರಣೆ ಕೊಡಿ. ನಂತರ ಈ ಒಗ್ಗರಣೆಗೆ ಮಜ್ಜಿಗೆ ಸೇರಿಸಿ ಚೆನ್ನಾಗಿ ತಿರುಗಿಸಿ. ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು ಸೇರಿಸಿ. ಬೇಕಿದ್ದರೆ, ಸ್ವಲ್ಪ ಪುದೀನಾ ಎಲೆ ಕತ್ತರಿಸಿ ಹಾಕಬಹುದು. ಈಗ ಮಜ್ಜಿಗೆ ರಸಂ ಸವಿಯಲು ಸಿದ್ದ. ಅನ್ನದ ಜೊತೆ ಸವಿಯಿರಿ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: