ಕವಿತೆ: ಕಾಡು ಹೂವು
– ವಿನು ರವಿ.
ಕಾಡು ಹೂವೊಂದು ಕಾಡಿನಲ್ಲೆ
ಇರಲು ಬಯಸುತಿದೆ
ಯಾರ ಹಂಗಿಲ್ಲದೆ
ಯಾವ ಹೊಗಳಿಕೆಯ ಬಯಸದೆ
ಸುತ್ತಲೂ ಹರಿವ ತೊರೆ
ಎತ್ತಲೊ ಸೆಳೆವ ಕುಹೂ ದನಿ
ಸುತ್ತಿ ಸುಳಿವ ತಂಗಾಳಿ
ಇನ್ನೇನು ಬೇಕು ಬಾಳಿಗೆ
ಒಂದೇ ದಿನದ ಬಾಳಾದರೇನು
ನನ್ನಿಶ್ಟದಂತೆ ಇರುವುದು
ಸುಕವಲ್ಲವೇನು
ಮಾತು ಬೇಕಿಲ್ಲ, ಮೌನ ಸಾಕಲ್ಲ
ಬೇಕು ಬೇಡಗಳ ಅರಿವೆ ಇಲ್ಲದೆ
ಇರುವುದೇ ಸೊಗಸಲ್ಲವೇನು
ದೇವರ ಮುಡಿಗೇರಿದರೇನು
ಹೆರಳ ಅಲಂಕರಿಸಿದರೇನು
ಕೊನೆಗೊಮ್ಮೆ ಮಣ್ಣಲಿ ಸೇರದಿರಲಾರೆನು
ಕಾಣದ ದೇವರನು
ಮನಸಾರೆ ಆರಾದಿಸುತಾ
ಮೌನದ್ಯಾನದಲಿ ಇರುವುದೆ
ಸುಕವಲ್ಲವೇನು
(ಚಿತ್ರ ಸೆಲೆ: pixabay.com)
ಇತ್ತೀಚಿನ ಅನಿಸಿಕೆಗಳು