ಕವಿತೆ: ಹೊಸ ವರುಶದ ಹೊಸ ಪಯಣ

– ಶ್ಯಾಮಲಶ್ರೀ.ಕೆ.ಎಸ್.

ಬೇವುಬೆಲ್ಲ, ಯುಗಾದಿ, Ugadi

ಚೈತ್ರ ಮಾಸದ ಆಗಮನಕ್ಕೆ
ನೂತನ ವರ‍್ಶವು ಅಡಿ ಇಟ್ಟಿದೆ
ನವಚೇತನ ಮೂಡಿದೆ

ವಸಂತ ರುತುವಿನ ಆರ‍್ಬಟಕ್ಕೆ
ಮಾಮರವು ಚಿಗುರೊಡೆದಿದೆ
ಕೋಗಿಲೆಯ ಮದುರ ಸ್ವರ ಹೊಮ್ಮಿದೆ

ನವಸಂವತ್ಸರದ ಆರಂಬಕ್ಕೆ
ಯುಗಾದಿಯು ಸಂಬ್ರಮ ತಂದಿದೆ
ನವೋಲ್ಲಾಸ ತುಂಬಿದೆ

ತಳಿರು ತೋರಣಗಳ ಸಿಂಗಾರಕ್ಕೆ
ತರುಲತೆಗಳು ಹಿಗ್ಗಿವೆ
ನವ ಬಾಳು ಹಸಿರಾಗಿದೆ

ಗಮಗಮಿಸುವ ಹೋಳಿಗೆಯ ನೈವೇದ್ಯಕ್ಕೆ
ಪರಮಾತ್ಮನು ದರೆಗಿಳಿದಂತಿದೆ
ಬಕ್ತರ ಮನವು ಹೊಸತನವ ಕೋರಿದೆ

ಬೇವಿನ ಕಹಿ, ಬೆಲ್ಲದ ಸಿಹಿಯೊಂದಿಗೆ
ಬದುಕು ನೋವು ನಲಿವುಗಳ ಸ್ವಾಗತಿಸಿದೆ
ಹೊಸ ವರುಶದ ಹೊಸ ಪಯಣ ಶುರುವಾಗಿದೆ

(ಚಿತ್ರ ಸೆಲೆ: welcome-the-new-year-with-ugadi)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Raghuramu N.V. says:

    ಚೆನ್ನಾಗಿದೆ

ಅನಿಸಿಕೆ ಬರೆಯಿರಿ:

Enable Notifications