ದೊಡ್ಡ ಪತ್ರೆ ಎಲೆ ಸಾರು
– ಸವಿತಾ.
ಬೇಕಾಗುವ ಸಾಮಾನುಗಳು
- ದೊಡ್ಡ ಪತ್ರೆ ಎಲೆ – 15
- ಈರುಳ್ಳಿ – 1
- ಹಸಿ ಮೆಣಸಿನಕಾಯಿ – 1
- ಹಸಿ ಕೊಬ್ಬರಿ ತುರಿ- 1/2 ಬಟ್ಟಲು
- ಜೀರಿಗೆ – 1/2 ಚಮಚ
- ಹಸಿ ಶುಂಟಿ – 1/4 ಇಂಚು
- ಚಕ್ಕೆ – 1/4 ಇಂಚು
- ಕರಿಮೆಣಸಿನ ಕಾಳು – 4
- ಸ್ವಲ್ಪ ಪುದೀನಾ ಎಲೆ
- ಸ್ವಲ್ಪ ಕೊತ್ತಂಬರಿ ಸೊಪ್ಪು
- ಹುಣಸೆ ರಸ – 2 ಚಮಚ
- ಬೆಲ್ಲ – 1 ಚಮಚ
- ಸಾಂಬಾರ್ ಪುಡಿ – 2 ಚಮಚ
- ತುಪ್ಪ ಅತವಾ ಎಣ್ಣೆ – 5 ಚಮಚ
- ಸಾಸಿವೆ- 1/4 ಚಮಚ
- ಜೀರಿಗೆ – 1/4 ಚಮಚ
- ಇಂಗು – 1/4 ಚಮಚ
- ಕರಿಬೇವು ಎಲೆ – 5-6
- ಒಣ ಕಾರದ ಪುಡಿ – 1 ಚಮಚ
- ಅರಿಶಿಣ ಪುಡಿ – ಸ್ವಲ್ಪ
- ಉಪ್ಪು – ರುಚಿಗೆ ತಕ್ಕಶ್ಟು
ಮಾಡುವ ಬಗೆ
ಬಾಣಲೆಗೆ ಒಂದು ಚಮಚ ತುಪ್ಪ ಹಾಕಿ ಬಿಸಿ ಮಾಡಿ. ಜೀರಿಗೆ, ಚಕ್ಕೆ, ಕರಿಮೆಣಸಿನ ಕಾಳು ಹಾಕಿ ಬಿಸಿ ಮಾಡಿ ತೆಗೆಯಿರಿ. ನಂತರ ದೊಡ್ಡ ಪತ್ರೆ ಎಲೆ, ಒಂದು ಹಸಿ ಮೆಣಸಿನ ಕಾಯಿ, ಕತ್ತರಿಸಿದ ಈರುಳ್ಳಿ, ಹಸಿ ಶುಂಟಿ ಹುರಿದು ತೆಗೆಯಿರಿ. ಹಸಿ ಕೊಬ್ಬರಿ ತುರಿ, ಪುದೀನಾ ಎಲೆ, ಕೊತ್ತಂಬರಿ ಸೊಪ್ಪು ಸೇರಿಸಿ ಮಿಕ್ಸರ್ ನಲ್ಲಿ ರುಬ್ಬಿ.
ಬಾಣಲೆಗೆ ನಾಲ್ಕು ಚಮಚದಶ್ಟು ತುಪ್ಪ ಹಾಕಿ ಬಿಸಿ ಮಾಡಿ. ಸಾಸಿವೆ ಜೀರಿಗೆ, ಇಂಗು, ಕರಿಬೇವು ಹಾಕಿ ಒಗ್ಗರಣೆ ಕೊಡಿ. ರುಬ್ಬಿದ ಮಿಶ್ರಣವನ್ನು ಸೇರಿಸಿ ಕೈಯಾಡಿಸಿ. ರುಚಿಗೆ ತಕ್ಕಶ್ಟು ಉಪ್ಪು ಸೇರಿಸಿ, ಅರಿಶಿಣ ಪುಡಿ ಮತ್ತು ಒಂದು ಚಮಚ ಒಣ ಕಾರದ ಪುಡಿ ಹಾಕಿ ತಿರುಗಿಸಿ. ಹುಣಸೆ ರಸ ಬೆಲ್ಲ ಸೇರಿಸಿ, ಸಾಂಬಾರ್ ಪುಡಿ ಹಾಕಿ ಒಂದು ಕುದಿ ಕುದಿಸಿ ಇಳಿಸಿ. ಈಗ ದೊಡ್ಡ ಪತ್ರೆ ಅತವಾ ಅಜಿವಾಯಿನ್ ಎಲೆ ಸಾರು ಸವಿಯಲು ಸಿದ್ದ. ಅನ್ನದ ಜೊತೆ ಕಲೆಸಿಕೊಂಡು ಸವಿಯಿರಿ.
ಇತ್ತೀಚಿನ ಅನಿಸಿಕೆಗಳು