ನಿಂಬೆ ಹಣ್ಣಿನ ಗೊಜ್ಜು

– ಸವಿತಾ.

ಬೇಕಾಗುವ ಸಾಮಾನುಗಳು

 • ನಿಂಬೆ ಹಣ್ಣು – 2
 • ಎಣ್ಣೆ – 3 ಚಮಚ
 • ಜೀರಿಗೆ – 1/2 ಚಮಚ
 • ಒಣ ಮೆಣಸಿನ ಕಾಯಿ – 4
 • ಮೆಂತೆ ಕಾಳು – 1/2 ಚಮಚ
 • ಉದ್ದಿನ ಬೇಳೆ – 1/2 ಚಮಚ
 • ಕಡಲೆ ಬೇಳೆ – 1/2 ಚಮಚ
 • ಕೊತ್ತಂಬರಿ ಕಾಳು – 1/2 ಚಮಚ
 • ಒಣಕೊಬ್ಬರಿ ತುರಿ -1/4 ಬಟ್ಟಲು
 • ಕರಿಮೆಣಸಿನ ಕಾಳು – 1/2 ಚಮಚ

ಒಗ್ಗರಣೆಗೆ

 • ಅರಿಶಿಣ ಸ್ವಲ್ಪ
 • ಜೀರಿಗೆ -1/4 ಚಮಚ
 • ಕರಿಬೇವು – 7-8 ಎಲೆ
 • ಇಂಗು – 1/4 ಚಮಚ
 • ಉಪ್ಪು ರುಚಿಗೆ ತಕ್ಕಶ್ಟು
 • ಸಾಸಿವೆ – 1/4 ಚಮಚ
 • ಬೆಲ್ಲದ ಪುಡಿ – 1 ಚಮಚ
 • ಕೊತ್ತಂಬರಿ ಸೊಪ್ಪು ಸ್ವಲ್ಪ

ಮಾಡುವ ಬಗೆ

ಕೊತ್ತಂಬರಿ ಕಾಳು, ಜೀರಿಗೆ, ಕರಿಮೆಣಸಿನ ಕಾಳು, ಮೆಂತೆ ಕಾಳು, ಉದ್ದಿನ ಬೇಳೆ, ಕಡಲೆ ಬೇಳೆ, ಒಣ ಮೆಣಸಿನಕಾಯಿ, ಒಂದು ಚಮಚ ಎಣ್ಣೆ ಹಾಕಿ ಸ್ವಲ್ಪ ಹುರಿದು ನಂತರ ಒಣಕೊಬ್ಬರಿ ತುರಿ ಸೇರಿಸಿ, ಸ್ವಲ್ಪ ಹುರಿದು ಒಲೆ ಆರಿಸಿ. ಮಿಕ್ಸರ್ ನಲ್ಲಿ ಪುಡಿ ಮಾಡಿ ಇಟ್ಟುಕೊಳ್ಳಿ.

ಬಾಣಲೆಗೆ ಎರಡು ಚಮಚ ಎಣ್ಣೆ ಹಾಕಿ, ಬಿಸಿ ಮಾಡಿ ಒಗ್ಗರಣೆ ಕೊಡಿ. ಸಾಸಿವೆ, ಜೀರಿಗೆ, ಕರಿಬೇವು, ಇಂಗು, ಅರಿಶಿಣ, ರುಚಿಗೆ ತಕ್ಕಶ್ಟು ಉಪ್ಪು ಸೇರಿಸಿ, ರುಬ್ಬಿದ ಮಿಶ್ರಣವನ್ನು ಸೇರಿಸಿ ಚೆನ್ನಾಗಿ ಹುರಿಯಿರಿ. ನಾಲ್ಕು ಲೋಟ ನೀರು ಸೇರಿಸಿ ಒಂದು ಕುದಿ ಬರುವವರೆಗೆ ಕುದಿಸಿ. ಒಂದು ಚಮಚ ಬೆಲ್ಲದಪುಡಿ ಹಾಕಿ ಇನ್ನೊಮ್ಮೆ ತಿರುಗಿಸಿ ಒಲೆ ಆರಿಸಿ. ಎರಡು ನಿಂಬೆ ಹಣ್ಣಿನ ರಸ ಸೇರಿಸಿ, ಸ್ವಲ್ಪ ಕತ್ತರಿಸಿದ ಕೊತ್ತಂಬರಿ ಸೊಪ್ಪು ಹಾಕಿ ಕೆಳಗಿಳಿಸಿ. ಈಗ ನಿಂಬೆ ಹಣ್ಣಿನ ಗೊಜ್ಜು ಸವಿಯಲು ಸಿದ್ದ. ಅನ್ನದ ಜೊತೆ ಸವಿಯಿರಿ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: