ಕವಿತೆ: ಚೆಲುವಿನ ಉತ್ಸವ

– ವಿನು ರವಿ.

nature

ನೀಲ ಮುಗಿಲಲಿ
ಚಂದಿರ ತಾರೆಗಳ ಬೆಳದಿಂಗಳ
ಮೋಹದುತ್ಸವ

ವನದ ಮಡಿಲಲಿ
ಬಣ್ಣದೋಕುಳಿಯಲಿ
ಮಿಂದು ಮೆರೆವ
ಹೂಗಳ ಚೆಲುವಿನುತ್ಸವ

ಕಡಲತಡಿಯಲಿ
ಮೊರೆಮೊರೆದು ಕುಣಿವ
ಅಲೆಗಳ ಒಲವಿನುತ್ಸವ

ಹನಿಹನಿ ಬೆವರಲಿ
ತೆನೆತೆನೆಯಾಗಿ ಬಳುಕುವ
ಹಸಿರ ಸಿರಿಯ ಉತ್ಸವ

ಮನದ ಮನೆಯಲಿ
ಬೋರ‍್ಗರೆದು ಮೆರೆವ
ಬಾವ ಮೈತ್ರಿಯ ರಾಗದ ಉತ್ಸವ

 

(ಚಿತ್ರ ಸೆಲೆ:  unsplash.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: