ಮಂಗಳೂರು ಬನ್ಸ್

– ಕಲ್ಪನಾ ಹೆಗಡೆ.

ಮಂಗಳೂರು ಬನ್ಸು

ಬೇಕಾಗುವ ಸಾಮಾನುಗಳು

  • ಮೈದಾ ಹಿಟ್ಟು – 2 ಕಪ್ಪು
  • ಪಚ್ಚ ಬಾಳೆಹಣ್ಣು – 2
  • ಮೊಸರು – ಅರ‍್ದ ಕಪ್ಪು
  • ಸಕ್ಕರೆ/ಬೆಲ್ಲ – ಅರ‍್ದ ಕಪ್ಪು
  • ರುಚಿಗೆ ತಕ್ಕಶ್ಟು ಉಪ್ಪು

ಮಾಡುವ ಬಗೆ:

ಮೊದಲು ಬಾಳೆ ಹಣ್ಣನ್ನು ಚೆನ್ನಾಗಿ ಕಿವುಚಿಕೊಂಡು ಅತವಾ ಮಿಕ್ಸಿ ಮಾಡಿಕೊಂಡು, ಅದಕ್ಕೆ ಸಕ್ಕರೆ ಅತವಾ ಬೆಲ್ಲವನ್ನು ಹಾಕಿ ಚೆನ್ನಾಗಿ ಕಲಸಿಕೊಳ್ಳಬೇಕು. ಆಮೇಲೆ ಮೊಸರು, ರುಚಿಗೆ ತಕ್ಕಶ್ಟು ಉಪ್ಪನ್ನು ಹಾಕಿ ಅದಕ್ಕೆ ಹಿಡಿಯುವಶ್ಟು ಮೈದಾಹಿಟ್ಟನ್ನು ಹಾಕಿ ಕಲಸಿಕೊಳ್ಳಬೇಕು. ಚಪಾತಿ ಹದಕ್ಕೆ ಕಲಸಿಕೊಂಡರೆ ಸಾಕು. ಆನಂತರ ಒಂದು ಚಮಚ ಎಣ್ಣೆಯನ್ನು ಮೇಲಿಂದ ಹಾಕಿ ಸವರಿ 4 ರಿಂದ 5 ಗಂಟೆಗಳ ಕಾಲ ಇದನ್ನು ಮುಚ್ಚಿಡಬೇಕು.

ಒಂದು ಬಾಣಲೆಗೆ ಎಣ್ಣೆಯನ್ನು ಹಾಕಿ, ಅದು ಕಾದ ಬಳಿಕ ಕಲಸಿಟ್ಟ ಹಿಟ್ಟಿನಿಂದ ಉಂಡೆಗಳನ್ನು ಮಾಡಿ ಅದಕ್ಕೆ ಮೈದಾ ಹಿಟ್ಟನ್ನು ಹಾಕಿ ಲಟ್ಟಣಿಗೆಯಿಂದ ಪೂರಿ ಅಳತೆಗೆ ಲಟ್ಟಿಸಿಕೊಂಡು ಕಾದ ಎಣ್ಣೆಗೆ ಬಿಡಬೇಕು. ಆಮೇಲೆ ನಡು ಉರಿ ಇಟ್ಟುಕೊಂಡು ಜಾಲಿ ಸೌಟಿನಿಂದ ಸ್ವಲ್ಪ ತಟ್ಟಬೇಕು. ಬನ್ ಉಬ್ಬಿ ಬಂದ ನಂತರ ಎರಡು ಕಡೆ ತಿರುವಿಹಾಕಿ ಬೇಯಿಸಿಕೊಳ್ಳಬೇಕು. ಈಗ ಬಿಸಿ ಬಿಸಿ ಮಂಗಳೂರು ಬನ್ಸ್ ಸಿದ್ದವಾಗಿದ್ದು, ಇದನ್ನು ಕಾಯಿ ಚಟ್ನಿಯೊಂದಿಗೆ ಅತವಾ ತುಪ್ಪದೊಂದಿಗೆ ಸವಿಯಲು ನೀಡಬಹುದು.

 

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: