ಮಾವಿನಕಾಯಿ ತೊಕ್ಕು
– ಸವಿತಾ.
ಬೇಕಾಗುವ ಸಾಮನುಗಳು
- ಒಂದು ಮಾವಿನಕಾಯಿ ತುರಿ
- ಸಾಸಿವೆ – ಅರ‍್ದ ಚಮಚ
- ಮೆಂತ್ಯೆ ಕಾಳು – 1 ಚಮಚ
- ಒಣ ಮೆಣಸಿನಕಾಯಿ – 6
- ಎಣ್ಣೆ – 4 ಚಮಚ
- ಸಾಸಿವೆ – ಕಾಲು ಚಮಚ
- ಕರಿಬೇವು – 6 ಎಲೆ
- ಇಂಗು – ಕಾಲು ಚಮಚ
- ಉಪ್ಪು – ರುಚಿಗೆ ತಕ್ಕಶ್ಟು
- ಅರಿಶಿಣ ಪುಡಿ – ಸ್ವಲ್ಪ
- ಬೆಲ್ಲದ ಪುಡಿ – 1 ಚಮಚ
ಮಾಡುವ ಬಗೆ
ಮೊದಲಿಗೆ ಸಾಸಿವೆ, ಮೆಂತ್ಯೆ ಕಾಳು, ಒಣ ಮೆಣಸಿನಕಾಯಿ ಸ್ವಲ್ಪ ಹುರಿದು ನಂತರ ಮಿಕ್ಸರ‍್‍ನಲ್ಲಿ ತಿರುಗಿಸಿ ಪುಡಿ ಮಾಡಿ ಇಟ್ಟುಕೊಳ್ಳಬೇಕು. ನಂತರ ಮಾವಿನಕಾಯಿಯನ್ನು ತೊಳೆದು ತುರಿದು ಇಟ್ಟುಕೊಳ್ಳಬೇಕು. ಮಾವಿನಕಾಯಿ ಹುಳಿ ಹೆಚ್ಚು ಇದ್ದರೆ ಸ್ವಲ್ಪ ಸಾಸಿವೆ, ಮೆಂತ್ಯೆ ಕಾಳು ಹೆಚ್ಚು ಹಾಕಬಹುದು.
ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಲು ಇಟ್ಟು, ನಂತರ ಕಾದ ಎಣ್ಣೆಗೆ ಸಾಸಿವೆ, ಕರಿಬೇವು, ಇಂಗು ಹಾಕಿ ಹುರಿಯಿರಿ. ನಂತರ ಮಾವಿನಕಾಯಿ ತುರಿ ಸೇರಿಸಿ ಚೆನ್ನಾಗಿ ಹುರಿಯಬೇಕು. ನಂತರ ಮಾಡಿಟ್ಟುಕೊಂಡ ಪುಡಿ ಹಾಕಿ ಹುರಿದುಕೊಳ್ಳಬೇಕು. ಉಪ್ಪು, ಅರಿಶಿಣ, ಬೆಲ್ಲದ ಪುಡಿ ಹಾಕಿ ಚೆನ್ನಾಗಿ ತಿರುಗಿಸಬೇಕು. ಎಲ್ಲ ಕರಗಿ ಮೆತ್ತಗೆ ಆದಮೇಲೆ ಒಲೆ ಆರಿಸಬೇಕು. ಇದು ಆರಿದ ನಂತರ ಒಂದು ಗಾಜಿನ ಡಬ್ಬಿಯಲ್ಲಿ ಹಾಕಿಟ್ಟರೆ ಒಂದು ವಾರದವರೆಗೆ ಇಟ್ಟುಕೊಂಡು ತಿನ್ನಬಹುದು. ಇದನ್ನು ಅನ್ನ, ಚಪಾತಿಯ ಜೊತೆ ಅತವಾ ಹಾಗೆಯೇ ಸೈಡ್ ಡಿಶ್ ಆಗಿಯೂ ಸವಿಯಬಹುದು.
ಇತ್ತೀಚಿನ ಅನಿಸಿಕೆಗಳು