ಕವಿತೆ: ಮಾಗಿಯ ಕಾಲ
– ವಿನಾಯಕ ಕವಾಸಿ.
ಮಾಗಿಯ ಕಾಲದ ಮಳೆಹನಿಗೆ
ಒಟರುತ ಕಪ್ಪೆಯು ಹಣಿಕಿರಲು
ಮೋಡದಿ ಮೂಡಿದೆ ಚಿತ್ರದ ಸಾಲು
ಮಿಂಚದಿ ಕಂಡಿದೆ ಅಜ್ಜಿಯ ಬೈತಿಲು
ಮಾವಿನ ಮರದಿ ಎಲೆ ಇಣುಕಿನಲಿ
ಹೊರಟಿದೆ ಕೋಕಿಲ ದನಿಯೊಂದು
ಆ ದನಿಯನು ಕೇಳುತ ಹುಚ್ಚಿನಲಿ
ಸವಿಸವಿಯುತ ಕುಣಿದಿದೆ ನವಿಲೊಂದು
ವನಸುಮಗಳ ಸೊಂಪಿನ ತೋಟದಲಿ
ಬಗೆಬಗೆ ಬಂಗಿಯ ಕುಣಿತದಲಿ
ಜಿಂಕೆಯು ನಲಿದಿದೆ ಬಿಂಕದಲಿ
ಮರಿಹಿಂಡನು ಕರೆಯುತ ಹರುಶದಲಿ
ಬನ್ನಿರಿ ಗೆಳೆಯರೆ ಬನ್ನಿರಿ ಚಿಣ್ಣರೆ
ಬನ್ನಿರಿ ನಲಿಯುತ ಆಡೋಣ
ಮಾಗಿಯು ಚೆಂದದಿ ಬಂದಿದೆ ಕಾಣಿರೆ
ಮೈಮರೆಯುತ ಹಾಡುತ ಸವಿಯೋಣ
(ಚಿತ್ರ ಸೆಲೆ: wikimedia.org)
ಇತ್ತೀಚಿನ ಅನಿಸಿಕೆಗಳು