ಮಾವಿನಹಣ್ಣಿನ ಸಾರು

– ಸವಿತಾ.

ಮಾವಿನ ಹಣ್ಣಿನ ಸಾರು

ಬೇಕಾಗುವ ಸಾಮನುಗಳು

  • ಮಾವಿನಹಣ್ಣು – 2
  • ಬೆಲ್ಲದ ಪುಡಿ – 2 ಚಮಚ
  • ಜೀರಿಗೆ – 1 ಚಮಚ
  • ಕರಿಬೇವಿನ ಎಲೆ – 10
  • ಇಂಗು – ಕಾಲು ಚಮಚ
  • ಸಾಸಿವೆ ಪುಡಿ – 5 ರಿಂದ 6 ಚಮಚ
  • ಉಪ್ಪು ರುಚಿಗೆ ತಕ್ಕಶ್ಟು
  • ಅರಿಶಿಣ ಪುಡಿ ಸ್ವಲ್ಪ
  • ಒಣ ಮೆಣಸಿನಕಾಯಿ – 2
  • ಕಾರದ ಪುಡಿ – 2 ಚಮಚ
  • ತುಪ್ಪ – 4 ಚಮಚ

ಮಾಡುವ ಬಗೆ

ಮಾವಿನಹಣ್ಣುಗಳನ್ನು ತೊಳೆದು ಸಣ್ಣ ಹೋಳುಗಳಾಗಿ ಹೆಚ್ಚಿ (ಬೇಕಾದಲ್ಲಿ ಸಿಪ್ಪೆ ಇಟ್ಟುಕೊಳ್ಳಬಹುದು) ನೀರು, ಉಪ್ಪು ಮತ್ತು ಅರಿಶಿಣ ಪುಡಿ ಸೇರಿಸಿ ಕುದಿಯಲು ಇಡಬೇಕು. ಸಾಸಿವೆ, ಜೀರಿಗೆ ಮತ್ತು ಒಣ ಮೆಣಸಿನಕಾಯಿಗಳನ್ನು ಹುರಿದು ಪುಡಿಮಾಡಿ ಇಟ್ಟುಕೊಳ್ಳಬೇಕು. ಬಾಣಲೆಗೆ ತುಪ್ಪ ಹಾಕಿ ಬಿಸಿಮಾಡಿ ಅದಕ್ಕೆ ಕರಿಬೇವು, ಇಂಗು ಮತ್ತು ಮಾಡಿಟ್ಟ ಪುಡಿ ಸೇರಿಸಿ ಸ್ವಲ್ಪ ಹುರಿದು ತೆಗೆದಿಡಬೇಕು. ನಂತರ ಈ ಹುರಿದ ಪುಡಿಯ ಮಿಶ್ರಣವನ್ನು ಕುದಿಯುವ ಮಾವಿನಹಣ್ಣುಗಳೊಂದಿಗೆ ಸೇರಿಸಿ ಕಾರದ ಪುಡಿ, ಬೆಲ್ಲದ ಪುಡಿ, ಬೇಕಾದಲ್ಲಿ ಇನ್ನಶ್ಟು ಉಪ್ಪು, ಅರಿಶಿಣ ಪುಡಿ ಹಾಕಿ ಕೈಯ್ಯಾಡಿಸಿ ಒಲೆ ಆರಿಸಿ. ಈಗ ಮಾವಿನಹಣ್ಣಿನ ಸಾರು ಸವಿಯಲು ಸಿದ್ದವಾಗಿದೆ. ಇದನ್ನು ಅನ್ನದ ಜೊತೆ ಸವಿಯಬಹುದು.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: