ಕವಿತೆ: ನಿವೇದನೆ
– ವೆಂಕಟೇಶ ಚಾಗಿ.
ಹ್ರುದಯಕ್ಕೊಂದು ವಿಳಾಸ ಬರೆದು
ನಿನ್ನ ಪಯಣವೆಲ್ಲಿ ನಲ್ಲೆ
ಎನ್ನ ಮನವ ನೀನು ಬಲ್ಲೆ
ನೆಲೆಯನೇಕೆ ಒಲ್ಲೆ
ಕನಸುಗಳನು ಬಿತ್ತಿ ಬೆಳೆದೆ
ಹರುಕು ಮುರುಕು ಬದುಕಿನಲ್ಲಿ
ನಿನ್ನ ಹಾಗೆ ಯಾರೂ ಇಲ್ಲ
ನೀನೆ ತಾನೆ ಹ್ರುದಯದಲ್ಲಿ
ಹಕ್ಕಿ ದ್ವನಿಯ ಹಾಡುಗಳಿಗೆ
ನಿನ್ನ ರಾಗ ಹಾಡಿ ನಲಿದೆ
ಬದುಕ ಬವಣೆ ಹಾದಿಗಳಿಗೆ
ಹಸಿರು ಹೊದಿಕೆ ಚೆಲ್ಲಿದೆ
ಒಂದು ಮಾತು ಹೇಳಲೇನು
ನೂರು ಜನ್ಮ ಬಂದರೂನು
ನೀನೆ ಮೊದಲು ನೀನೆ ಕೊನೆ
ಪಯಣವಿಲ್ಲೆ ಮುಗಿದರೂನು
ನೀನು ಬರುವ ನಿರೀಕ್ಶೆಯಲ್ಲಿ
ಎನ್ನ ಹ್ರುದಯ ಮಿಡಿದಿದೆ
ಕಂಡ ಕನಸು ದಿನದಿ ದಿನದಿ
ಗಗನ ಮೀರಿ ಬೆಳೆದಿದೆ
(ಚಿತ್ರ ಸೆಲೆ: pxhere.com)
ಇತ್ತೀಚಿನ ಅನಿಸಿಕೆಗಳು