ಬೆಳ್ಳುಳ್ಳಿ ತಿಳಿಸಾರು
– ಸವಿತಾ.
ಬೇಕಾಗುವ ಸಾಮಾನುಗಳು
- ಬೆಳ್ಳುಳ್ಳಿ ಎಸಳು – 15
- ಕರಿಬೇವು ಎಲೆ – 10
- ಕೊತ್ತಂಬರಿ ಸೊಪ್ಪು ಸ್ವಲ್ಪ
- ಸಾಸಿವೆ – ಕಾಲು ಚಮಚ
- ಹಸಿ ಶುಂಟಿ – ಕಾಲು ಇಂಚು
- ಒಣ ಮೆಣಸಿನಕಾಯಿ – 3 ರಿಂದ 4
- ಕರಿ ಮೆಣಸಿನ ಕಾಳು – 8
- ಜೀರಿಗೆ – ಅರ‍್ದ ಚಮಚ
- ಮೆಂತ್ಯೆ ಕಾಳು – ಕಾಲು ಚಮಚ
- ಕೊತ್ತಂಬರಿ ಕಾಳು – 2 ಚಮಚ
- ತೊಗರಿ ಬೇಳೆ – 2 ಚಮಚ
- ಉಪ್ಪು ರುಚಿಗೆ ತಕ್ಕಶ್ಟು
- ಅರಿಶಿಣಪುಡಿ ಸ್ವಲ್ಪ
- ಹುಣಸೇ ರಸ – 1 ಚಮಚ
- ತುಪ್ಪ – 2 ಚಮಚ
ಮಾಡುವ ಬಗೆ
ಮೊದಲಿಗೆ ಬಾಣಲೆಯನ್ನು ಒಲೆಯ ಮೇಲಿಟ್ಟು ತೊಗರಿ ಬೇಳೆ ಮತ್ತು ಕೊತ್ತಂಬರಿಕಾಳು ಹಾಕಿ ಹುರಿದು ತೆಗೆಯಿರಿ. ಹಸಿ ಶುಂಟಿ , ಒಣಮೆಣಸಿನ ಕಾಯಿ, ಮೆಂತ್ಯೆಕಾಳು, ಜೀರಿಗೆ, ಕರಿಮೆಣಸಿನಕಾಳು ಮತ್ತು ನಾಲ್ಕು ಎಲೆ ಕರಿಬೇವು ಹಾಕಿ ಹುರಿದುಕೊಂಡು ಒಲೆ ಆರಿಸಿ. ಆರಿದ ನಂತರ ಹುರಿದುಕೊಂಡ ಎಲ್ಲಾ ಸಾಮಗ್ರಿಗಳನ್ನು ಮಿಕ್ಸರ್‍ನಲ್ಲಿ ಪುಡಿಮಾಡಿಟ್ಟುಕೊಳ್ಳಬೇಕು. ಆನಂತರ ತುಪ್ಪ ಬಾಣಲೆಗೆ ಹಾಕಿ ಬಿಸಿ ಮಾಡಿಕೊಳ್ಳಬೇಕು. ನಂತರ ಸಾಸಿವೆ, ಕರಿಬೇವಿನ ಎಲೆ ಮತ್ತು ಬೆಳ್ಳುಳ್ಳಿ ಎಸಳುಗಳನ್ನು ಜಜ್ಜಿ ಹಾಕಿ ಚೆನ್ನಾಗಿ ಹುರಿದುಕೊಂಡು, ಮಾಡಿಟ್ಟುಕೊಂಡ ಪುಡಿ ಹಾಕಿಕೊಳ್ಳಿ. ನಂತರ ಉಪ್ಪು, ಹುಣಸೇ ರಸ ಮತ್ತು ಅರಿಶಿಣಪುಡಿ ಹಾಕಿ ಹುರಿದು ನಂತರ ಮೂರು ಲೋಟ ನೀರು ಸೇರಿಸಿ ಒಂದು ಕುದಿ ಕುದಿಸಿ ಇಳಿಸಿ. ಇದರ ಮೇಲೆ ಸ್ವಲ್ಪ ಕತ್ತರಿಸಿದ ಕೊತ್ತಂಬರಿ ಸೊಪ್ಪು ಉದುರಿಸಿ. ಈಗ ಬಿಸಿ ಬಿಸಿ ಬೆಳ್ಳುಳ್ಳಿ ತಿಳಿಸಾರು ಸವಿಯಲು ಸಿದ್ದವಾಗಿದೆ. ಮಳೆಗಾಲದ ಸಮಯದಲ್ಲಿ ಬೆಳ್ಳುಳ್ಳಿ ತಿಳಿಸಾರು ಸವಿಯಲು ಚೆನ್ನಾಗಿರುತ್ತದೆ.ಅನ್ನ ಮತ್ತು ತುಪ್ಪದ ಜೊತೆ ಬೆಳ್ಳುಳ್ಳಿ ರಸಮ್ ಸವಿಯಬಹುದು.
ಇತ್ತೀಚಿನ ಅನಿಸಿಕೆಗಳು