ಕವಿತೆ: ಪ್ರೀತಿ

– ವಿನು ರವಿ.

ಒಲವು, ಪ್ರೀತಿ, Love

ದೇಹ ಬಾಶೆಯನು
ಮೀರಿ ಮಿಡಿವ
ಮನಸು ಮನಸುಗಳ
ಮದುರ ಸಂಗಮ

ಹೇಳಲಾಗದ ತಾಳಲಾಗದ
ಹ್ರುದಯ ಮೀಟುವ
ಚೆಲುವ ಬಾವ ಸಂಬ್ರಮ

ಅನಂತದಾಚೆಗೂ
ಅರಳಿ ನುಡಿವ
ದಿವ್ಯ ಮುರಳಿ ಗಾನ

ಸುಕದುಕ್ಕವನು ಮೀರಿ
ನಗುವ ಸುಂದರ
ನಲುಮೆಗೆ ಸೋಪಾನ

ಕಂಬನಿಯ ಕಣ್ಣಲ್ಲೂ
ಬಣ್ಣವ ಮಿಂಚಿಸಿ
ಹೊಳೆವ ಅಮ್ರುತ ಗಾನ

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: