ರಾಗಿ ಉಂಡೆ

– ಸವಿತಾ.

ಬೇಕಾಗುವ ಪದಾರ‍್ತಗಳು

  • ರಾಗಿ ಹಿಟ್ಟು – 3 ಲೋಟ
  • ಏಲಕ್ಕಿ – 2
  • ಲವಂಗ – 2
  • ಚಕ್ಕೆ – 1/4 ಇಂಚು
  • ತುಪ್ಪ – 8 ಚಮಚ
  • ಕರ‍್ಜೂರ – 1 ಲೋಟ
  • ಬೆಲ್ಲದ ಪುಡಿ – 3/4 ಲೋಟ
  • ಬಾದಾಮಿ ಮತ್ತು ಗೋಡಂಬಿ – 1/4 ಲೋಟ
  • (ಒಣ ದ್ರಾಕ್ಶಿ ಇದ್ದರೆ ಹಾಕಿ)

ಮಾಡುವ ಬಗೆ

ಕರ‍್ಜೂರದ ಬೀಜ ತೆಗೆದು ಸಣ್ಣದಾಗಿ ಕತ್ತರಿಸಿ ಇಟ್ಟುಕೊಳ್ಳಿ. ಬಾದಾಮಿ, ಗೋಡಂಬಿ ಸಣ್ಣದಾಗಿ ಕತ್ತರಿಸಿ ಇಟ್ಟುಕೊಳ್ಳಿ. ಒಂದು ಚಮಚ ತುಪ್ಪ ಹಾಕಿ ಬಾದಾಮಿ, ಗೋಡಂಬಿ ಹುರಿದು ತೆಗೆದಿಡಿ. ನಂತರ ಎರಡು ಚಮಚ ತುಪ್ಪ ಹಾಕಿ ಕರ‍್ಜೂರ ಹುರಿದು ತೆಗೆದಿಡಿ. ರಾಗಿ ಹಿಟ್ಟು, ತುಪ್ಪ ಹಾಕಿ ಗಮ ಗಮ ಪರಿಮಳ ಬರುವವರೆಗೆ ಹುರಿಯಿರಿ. ನಂತರ ಬೆಲ್ಲದ ಪುಡಿಗೆ ಎರಡು ಚಮಚ ನೀರು ಸೇರಿಸಿ ಕರಗಿಸಿ ಬಿಸಿ ಮಾಡಿ ಇಳಿಸಿ (ಬೆಲ್ಲ ಕರಗಿದರೆ ಸಾಕು, ಪಾಕ ಬೇಕಿಲ್ಲ). ಆಮೇಲೆ ಹುರಿದ ರಾಗಿ ಹಿಟ್ಟು ಮತ್ತು ಹುರಿದ ಗೋಡಂಬಿ, ಬಾದಾಮಿ, ಕರ‍್ಜೂರ ಎಲ್ಲ ಹಾಕಿ ಚೆನ್ನಾಗಿ ಕಲಸಿ. ಏಲಕ್ಕಿ, ಲವಂಗ, ಚಕ್ಕೆ ಪುಡಿ ಮಾಡಿ ಹಾಕಿ, ತಿಕ್ಕಿ ಒಂದೊಂದೇ ಉಂಡೆ ಕಟ್ಟಿ ಇಟ್ಟುಕೊಳ್ಳಿ. ಈಗ ರಾಗಿ ಉಂಡೆ ಸವಿಯಲು ಸಿದ್ದ. ಆರೋಗ್ಯಕರ ಮತ್ತು ರುಚಿಕರವಾದ ರಾಗಿ ಉಂಡೆ ಸವಿಯಿರಿ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications