ಕರಾಚಿ ಹಲ್ವಾ

– ಸವಿತಾ.

ಬೇಕಾಗುವ ಸಾಮಾನುಗಳು

  • ಕಾರ‍್ನ್ ಪ್ಲೋರ್ – 1 ಲೋಟ
  • ಸಕ್ಕರೆ – 1.5 ಲೋಟ
  • ಬಾದಾಮಿ – 2
  • ಗೋಡಂಬಿ – 2
  • ನಿಂಬೆ ಹೋಳು – 1/2
  • ಏಲಕ್ಕಿ – 2
  • ಅರಿಶಿಣ ಪುಡಿ – 1/4 ಚಮಚ
  • ತುಪ್ಪ – 6-8 ಚಮಚ

ಮಾಡುವ ಬಗೆ

ಕಾರ‍್ನ್ ಪ್ಲೋರ್ 4 ಲೋಟ ನೀರಿನಲ್ಲಿ ಚೆನ್ನಾಗಿ ಕಲಸಿ ಇಟ್ಟುಕೊಳ್ಳಿ. ಸಕ್ಕರೆಗೆ ನೀರು ಹಾಕಿ, ಬಿಸಿ ಮಾಡಿ. ಸಕ್ಕರೆ ಕರಗಿದ ಮೇಲೆ ನಿಂಬೆ ರಸ ಹಾಕಿ ಸಣ್ಣ ಉರಿಯಲ್ಲಿ ಇಟ್ಟು ಕಲಸಿಟ್ಟ ಕಾರ‍್ನ್ ಪ್ಲೋರ್ ಹಾಕಿ, ಬಣ್ಣ ಬೇಕಾದರೂ ಹಾಕಬಹುದು ಅತವಾ ಅರಿಶಿಣ ಪುಡಿ ಸ್ವಲ್ಪ ಹಾಕಬಹುದು. ಇದು ಕೇವಲ ಅಂದಕ್ಕಾಗಿ ಹಾಕುವುದು ಅಶ್ಟೇ. ನಡುನಡುವೆ ತುಪ್ಪ ಹಾಕುತ್ತಾ ಚೆನ್ನಾಗಿ ತಿರುಗಿಸುತ್ತಾ ಇರಬೇಕು.

ಗಟ್ಟಿಯಾಗಿ ಚಕಳಿ ಕತ್ತರಿಸಲು ಬರುವಂತೆ ನೋಡಿ ಚೆನ್ನಾಗಿ ಕುದಿಸಿ ಇಳಿಸಿ. ನಂತರ ಏಲಕ್ಕಿ ಪುಡಿ ಮಾಡಿ ಹಾಕಿ. ಒಂದು ತಟ್ಟೆಗೆ ತುಪ್ಪ ಸವರಿ ಅದರ ಮೇಲೆ ಮಿಶ್ರಣ ಸುರಿದು, ಬಾದಾಮಿ ಗೋಡಂಬಿ ಕತ್ತರಿಸಿ ಹಾಕಿ ಚಕಳಿ ಚೌಕಾಕರ ಕತ್ತರಿಸಿ. ಈಗ ಕರಾಚಿ ಹಲ್ವಾ ಸವಿಯಲು ಸಿದ್ದ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: