ಕೊಬ್ಬರಿ ಬರ‍್ಪಿ
– ಸವಿತಾ.
ಬೇಕಾಗುವ ಸಾಮಾನುಗಳು
- ಹಾಲು – 2 ಲೋಟ
- ಹಸಿ ಕೊಬ್ಬರಿತುರಿ – 2 ಲೋಟ
- ಸಕ್ಕರೆ ಅತವಾ ಬೆಲ್ಲದ ಪುಡಿ – 1 ಲೋಟ
- ಏಲಕ್ಕಿ – 2
- ಬಾದಾಮಿ, ಗೋಡಂಬಿ ಚೂರುಗಳು ಸ್ವಲ್ಪ
- ತುಪ್ಪ – 2 ಚಮಚ
ಮಾಡುವ ಬಗೆ
ಮೊದಲಿಗೆ ಬಾಣಲೆ ಒಲೆಯ ಮೇಲಿಟ್ಟು ತುಪ್ಪ ಹಾಕಿರಿ. ಆಮೇಲೆ ಇದಕ್ಕೆ ಏಲಕ್ಕಿ ಎಸಳು ಬಿಡಿಸಿ ಹಾಕಿ ಮತ್ತು ಹಸಿ ಕೊಬ್ಬರಿ ತುರಿ ಹಾಕಿ ಹುರಿಯಿರಿ. ಆಮೇಲೆ ಹಾಲು, ಸಕ್ಕರೆ ಹಾಕಿ ಚೆನ್ನಾಗಿ ಕುದಿಸಿ. ಇದೆಲ್ಲವೂ ಹೊಂದಿಕೊಂಡು ಗಟ್ಟಿಯಾದ ಮೇಲೆ ಒಲೆ ಆರಿಸಿ ಇಳಿಸಿ. ಈಗ ಒಂದು ತಟ್ಟೆಗೆ ತುಪ್ಪ ಸವರಿ ಅದರ ಮೇಲೆ ಈ ಮಿಶ್ರಣ ಸುರಿದು, ಅದರ ಮೇಲೆ ಅಲಂಕಾರಕ್ಕೆ ಬಾದಾಮಿ, ಗೋಡಂಬಿ ಕತ್ತರಿಸಿ ಹಾಕಿ ಚೌಕ ಅತವಾ ಡೈಮಂಡ್ ಆಕಾರ ಕೊಟ್ಟು ಕತ್ತರಿಸಿ ಇಟ್ಟುಕೊಳ್ಳಿ. ಈಗ ಕೊಬ್ಬರಿ ಬರ‍್ಪಿ ಸವಿಯಲು ಸಿದ್ದವಾಗಿದೆ. ಇದು ಹೆಚ್ಚಾಗಿ ಗುಜರಾತ್ ಕಡೆಗೆ ಮಾಡುವ ಸಿಹಿ ತಿಂಡಿಯಾಗಿದೆ.
ಇತ್ತೀಚಿನ ಅನಿಸಿಕೆಗಳು