ಸಂಕ್ರಾಂತಿ ಸಂಬ್ರಮ

– .

ಸಂಕ್ರಾಂತಿ, Sankranti

ನಮ್ಮ ಬಾರತ ದೇಶವು ದಾರ‍್ಮಿಕ ಸಂಪ್ರದಾಯ ಹಬ್ಬಗಳ ತವರೂರು. ಸಾವಿರಾರು ಬಾಶೆಗಳು, ನೂರಾರು ಜನಾಂಗಗಳು ಮತ್ತು ಹತ್ತಾರು ದರ‍್ಮಗಳನ್ನು ಹೊಂದಿರುವ, ವಿವಿದತೆಯಲ್ಲಿ ಏಕತೆಯ ಸಾರುವ ದೇಶ ಬಾರತ. ವರ‍್ಶಕ್ಕೆ ನೂರೆಂಟು ಜಾತ್ರೆ, ಹಬ್ಬಗಳ ಆಚರಣೆಗಳನ್ನು ಮಾಡುವ ದೇಶ. ಇಂತಹ ದೇಶದಲ್ಲಿ ಸಂಕ್ರಾಂತಿ ಹಬ್ಬವು ಅತ್ಯಂತ ಸಡಗರ ಸಂಬ್ರಮವನ್ನು ಹೊತ್ತು ತರುವ ಹಬ್ಬವಾಗಿದೆ.

ಕ್ರುಶಿ ಪ್ರದಾನ ದೇಶವಾದ ಬಾರತದಲ್ಲಿ ಶ್ರಮಜೀವಿಗಳಾದ ಅನ್ನದಾತರು ವರ‍್ಶವೆಲ್ಲಾ ಹೊಲದಲ್ಲಿ ದುಡಿದು ಬೆಳೆ ಬೆಳೆಯುವರು. ಸಂಕ್ರಾಂತಿ ಹಬ್ಬವು, ಉತ್ತಮ ಪಸಲು ಕೈಗೆ ಬಂದಾಗ, ಬೂಮಿ ತಾಯಿಯ ಪೂಜಿಸಲು ಹಾಗೂ ಕ್ರುಶಿ ಚಟುವಟಿಕೆಗಳಲ್ಲಿ ತಮಗೆ ನೆರವಾದ ಎತ್ತುಗಳಿಗೆ ಶ್ರಮಿಕ ಕೂಲಿಕಾರರಿಗೆ ದನ್ಯವಾದ ಸಲ್ಲಿಸುವ ಸಲುವಾಗಿ ಆಚರಿಸುವ ಹಬ್ಬವಾಗಿದೆ.

ಮಾಗಿಯ ಚುಮು ಚುಮು ಚಳಿಯ ಸಮಯದಲ್ಲಿ, ಸುಗ್ಗಿಯ ಸಂಬ್ರಮದ ವಾತಾವರಣವು ಗ್ರಾಮೀಣ ಪ್ರದೇಶದ ಜನರಲ್ಲಿ ಮನೆ ಮಾಡುತ್ತದೆ. ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತಾಡು ಎಂಬ ಸದಾಶಯವನ್ನು ಅರಿತು, ಸಹಬಾಳ್ವೆಯ ಜೀವನ ನಡೆಸಬೇಕೆಂದು ಸಾರುವ ಹಬ್ಬ ಸಂಕ್ರಾಂತಿ. ಉತ್ತರಾಯಣ ಪುಣ್ಯಕಾಲದಿ ಬಾಸ್ಕರನು ರತಸಪ್ತಮಿ ಪತದಲ್ಲಿ ಮಕರ ರಾಶಿ ಮನೆಯ ಪ್ರವೇಶವನ್ನು ಮಾಡುವ ಸಮಯವು ಮಣ್ಣಿನ ಮಕ್ಕಳ ಸುಗ್ಗಿಗೆ ಸಂಬ್ರಮವನ್ನು ತರುವ ಹಬ್ಬ ಸಂಕ್ರಾಂತಿ.

ಪುರಾಣ ಹಿನ್ನೆಲೆ:

ಪುರಾಣದ ಪ್ರಕಾರ ಹಿಂದೊಮ್ಮೆ ಸಂಕರಾಸುರ ಎಂಬ ರಾಕ್ಶಸನನ್ನು ಆದಿಶಕ್ತಿ ಸಂಹರಿಸಿದ ಶುಬ ಗಳಿಗೆಯಂದು ಆದಿಶಕ್ತಿಯು ಸಂಕ್ರಾಂತಿ ಎಂಬ ಹೆಸರನ್ನು ಪಡೆದಳೆಂಬುವ ಕತೆಯಿದೆ. ಸಂಕ್ರಾಂತಿ ದೇವತೆಯು, ಕಾಲದ ಮಹಿಮೆಯ ಜಗಕ್ಕೆ ಸಾರುತ, ಕಾಲನ ಮ್ರುತ್ಯುಬಂದದಿಂದ ಪಾರಾಗುವ ಬಗೆಯ ಜ್ನಾನ ಬೋದಿಸುವವಳಾಗಿದ್ದಾಳೆ.

ಸಹಬಾಳ್ವೆ, ಸಹೋದರತೆ ಬಿತ್ತುತ್ತ ಬರುವ ಸಂಕ್ರಾಂತಿ, ಸರ‍್ವಜನಾಂಗದಿ ಬಾವೈಕ್ಯತೆ ಸಮ್ರುದ್ದಿಯ ಕ್ರಾಂತಿ ತರುತ್ತದೆ. ನಾವು ಎಳ್ಳು ಬೆಲ್ಲ, ಕಬ್ಬನು ಸರ‍್ವರೊಡನೆ ಹಂಚಿ ಸವಿಯೋಣ. ಎಳೆಯರ ಮನಸ್ಸನು ಹೊಂದಿ ನಾವೆಲ್ಲರೂ ಬಾಳೋಣ, ವಿಶ್ವವೆಲ್ಲವೂ ವಸುದೈವ ಕುಟುಂಬವೆಂಬುದ ತಿಳಿಯೋಣ, ಎಲ್ಲಿಯೇ ಇರಲಿ , ಹೇಗೆ ‌ಇರಲಿ ಸನಾತನ ಸಂಸ್ಕ್ರುತಿಯ ಸಾರೋಣ.

( ಚಿತ್ರ ಸೆಲೆ: apk-cloud.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: