ಕವಿತೆ: ಬಾಳೆಂಬ ಕಡಲು

– ರಾಮಚಂದ್ರ ಮಹಾರುದ್ರಪ್ಪ.

ಕಡಲಿನ ಆಳ ಬಲ್ಲವರ‍್ಯಾರು?
ಆ ಬೋರ‍್ಗರೆಯುವ ನೀರಿನ ಜೋಕು
ಒಮ್ಮೆಲೆ ಏಳುವ ಆ ಅಲೆಗಳ ಸದ್ದು
ಮರುಕ್ಶಣವೇ ಸದ್ದಿಲ್ಲದ ಮೌನ
ಬಾಳು ಕೂಡ ಹೀಗೇ ಅಲ್ಲವೇ
ಒಮ್ಮೆ ನಲಿವಿನ ಸಿಹಿ
ಬೆನ್ನಲ್ಲೇ ನೋವಿನ ಕಹಿ
ಬಾಳೂ ಒಂದು ಕಡಲು
ಸುಕವಿರಲಿ, ದುಕ್ಕವಿರಲಿ
ನೋವಿರಲಿ, ನಲಿವಿರಲಿ
ಮುಳುಗದೆ ದಡದಲ್ಲಿ ಒಟ್ಟಿಗೆ ಸಾಗೋಣ
ಬಾಳ ಪಯಣವೇ ಒಂದು ಸೊಗಸು
ಮನುಜನೊಬ್ಬನಿಗೇ ಅದನ್ನರಿಯುವ ಅಳವು
ಆದರೂ, ಮುಂದೇನು ಬಲ್ಲವರ‍್ಯಾರು
ಇಂದಶ್ಟೇ ದಿಟ
ಕಡಲೂ ದಿಟ

(ಚಿತ್ರ ಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. ಗಂಗಾಧರ says:

    ಸಿಂಪಲ್ಲಾದ ಸರಳ ಕವಿತೆ.

    ಈ ವರ್ಷ ಎಲ್ಲರ ಕನ್ನಡ ಹೆಚ್ಚು ಬಳಸಲು ತೀರ್ಮಾನಿಸಿದ್ದೇನೆ.

ಅನಿಸಿಕೆ ಬರೆಯಿರಿ: